ಕಲಬುರಗಿಯಲ್ಲಿ ವಿದ್ಯಾರ್ಥಿ ಕಿಡ್ನಾಪ್​?

kidnap
Published on

ಕಲಬುರಗಿ: ಆಳಂದ ರಸ್ತೆಯ ದೇವಿ ನಗರದಲ್ಲಿ ವಿದ್ಯಾರ್ಥಿಯೊಬ್ಬನನ್ನು ಯಾರೋ ಅಪಹರಿಸಿದ್ದಾರೆ ಎಂದು ಪಾಲಕರು ದೂರಿದ್ದಾರೆ. ಅಭಿಷೇಕ ಖಂಡೇರಾವ ಜಾಧವ್ (16) ಕಿಡ್ನಾಪ್ ಆದವ.

ಮಿಲೇನಿಯಂ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದು, ಶಾಲೆಗೆ ಹೋದಾತ ಮರಳಿ ಮನೆಗೆ ಬಂದಿಲ್ಲ. ಶಾಲೆಗೂ ಹೋಗಿಲ್ಲ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಹಲವೆಡೆ ಸಿಸಿ ಕ್ಯಾಮರಾಗಳಲ್ಲಿ ಪರಿಶೀಲಿಸಿದರೂ ಸುಳಿವು ಸಿಕ್ಕಿಲ್ಲ. ಹೀಗಾಗಿ ತಮ್ಮ ಪುತ್ರನನ್ನು ಅಪಹರಿಸಿರುವ ಸಾಧ್ಯತೆ ಇದೆ ಎಂದು ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿರುವ ವಿದ್ಯಾರ್ಥಿ ತಂದೆ ಖಂಡೇರಾವ ದೂರಿದ್ದಾರೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net