ಕಲಬುರಗಿಯಲ್ಲಿ ಮೆರವಣಿಗೆ ವೇಳೆ ಯುವಕನ ಬರ್ಬರ ಕೊಲೆ

IMG-20240414-WA0075
Published on

ಕಲಬುರಗಿ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಮೆರವಣಿಗೆ ವೇಳೆ ಯುವಕನೋರ್ವನ ದಾರುಣ ಹತ್ಯೆಯಾದ ಘಟನೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಅಶೋಕ ನಗರದ ಆಕಾಶ (26) ದಾರುಣ ಹತ್ಯೆಗೊಳಗಾದ ಯುವಕ. ನಗರದ ರಾಷ್ಟ್ರಪತಿ ವೃತ್ತದ (ನ್ಯೂ ಜೇವರ್ಗಿ ಕ್ರಾಸ್) ಸಮೀಪದ ಆಶ್ರಯ ಬಾರ್ ಬಳಿ ಅಂಬೇಡ್ಕರ್ ಜಯಂತಿ ನಿಮಿತ್ತ ಅದ್ಧೂರಿ ಮೆರವಣಿಗೆಯಲ್ಲಿ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆ ಉಸಿರು ಎಳೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಖಾಸಗಿ ಆಸ್ಪತ್ರೆಯಲ್ಲಿ ಯುವಕನ ಸಾವು ದೃಢಪಡಿಸಿದ ನಂತರ ಶವವನ್ನು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಆಕಾಶ್ ಬೆಳಗ್ಗೆಯಿಂದ ಸ್ನೇಹಿತರ ಜತೆ ಹೊರಗೆ ಇದ್ದ ಈ ವೇಳೆ ಸ್ನೇಹಿತರೊಂದಿಗೆ ಜಗಳ ಆಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ಹುಡುಗರು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ಆರೋಪಿಗಳ ಬೆನ್ನಟ್ಟಿದ ಪೊಲೀಸರು
ಒದ್ದಾಡಿದ ಯುವಕ ಆಕಾಶ: ಘಟನೆ ನಂತರ ಸುತ್ತಲೂ ಬಂದೋಬಸ್ತ್ ನಲ್ಲಿದ್ದ ಪೊಲೀಸರು ಕೂಡಲೇ ಆರೋಪಿಗಳನ್ನು ಬೆನ್ನಟ್ಟಿದ್ದರು. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಆಕಾಶನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಗೊಡವೆಗೆ ಸುತ್ತಲಿನ ಯಾರೂ ಹೋಗಲಿಲ್ಲ. ಕೆಲವು ಸಾರ್ವಜನಿಕರು ಬಂದು ಆಕಾಶನನ್ನು ಆಸ್ಪತ್ರೆಗೆ ಸಾಗಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net