ಕಲಬುರಗಿಯಲ್ಲಿ ಮಟಕಾ ಬುಕ್ಕಿ ಬಂಧನ

Crime ( Arrest)
Published on


ಕಲಬುರಗಿ ನಗರದ  ರೋಜಾ ಪೊಲೀಸ್ ಠಾಣೆಯ ವ್ಯಾಪ್ತಿಯ ಮೆಹಿಬೂಬ್ ಸುಭ್ಹಾನಿ ದರ್ಗಾ ಸಮೀಪದ  ಹೊಟೇಲ್ ಬಳಿಯಲ್ಲಿ ಮಟಕಾ ಸಂಖ್ಯೆ ಬರೆದುಕೊಳ್ಳುತ್ತಿದ್ದ ಮಾಹಿತಿಯಂತೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಕಾಲಕ್ಕೆ ರಾಮಜಿ ನಗರದ ಉದಯಕುಮಾರ ಹಾಗರಗಿ ಎಂಬಾತನನ್ನು ಬಂಧಿಸಿ ೩೩೬೦ರೂ. ಹಾಗೂ ಚೀಟಿ, ಪೆನ್ ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಪಿಎಸ್‌ಐ ಬಸವರಾಜ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ರೋಜಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net