

ಯಾದಗಿರಿ: ಕಲ್ಯಾಣ ಕರ್ನಾಟಕದ ಪ್ರಗತಿಗಾಗಿ ಮತ್ತು ೩೭೧(ಜೆ) ಕಲಂ ಪರಿಣಾಮಕಾರಿಯಾಗಿ ಜಾರಿಯಾಗಲು ಕೂಡಲೇ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತು.
ನಗರದ ಸಂಘಟನೆ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ್, ಸೆ.೧೭ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನವಾಗಿದೆ. ಅಂದೇ ಕಲಬುರಗಿಯಲ್ಲಿ ನಡೆಸಲು ಉz್ದೆÃಶಿಸಿರುವ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ತಿರ್ಮಾನ ಕೈಗೊಂಡು ಕೂಡಲೇ ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಸಕಾಲಕ್ಕೆ ಮುಬಂಡ್ತಿ ಸಿಗುತ್ತಿಲ್ಲ. ನೌಕರಿಗಾಗಿ ನಡೆಯುವ ನೇಮಕಾತಿಯಲ್ಲೂ ಈ ಭಾಗಕ್ಕೆ ಅನ್ಯಾಯವಾಗುತ್ತಿದೆ. ಇಲ್ಲಿರುವ ಕೆಕೆಆರ್‌ಡಿಬಿ ಕೇವಲ ಕಾಮಗಾರಿಗಳಿಗೆ ಅನುಮೊದನೆ ನೀಡುವ ಮತ್ತು ಹಣ ಬಿಡುಗಡೆ ಮಾಡುವ ಕಚೇರಿಯಾಗಿದೆ. ೩೭೧(ಜೆ)ಕಲಂನ ನಿಜವಾದ ಕನಸು ನನಸಾಗಬೇಕಾದರೆ ಇಲ್ಲಿ ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ. ಅಲ್ಲದೆ ಹಿಂದುಳಿದ ಯಾದಗಿರಿ ಜಿಲ್ಲೆಗೆ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಸ್ಥಾಪನೆ ಮಾಡಬೇಕು ಎಂದರು.
ಇತ್ತೀಚಿಗೆ ಸುರಿದ ಮಳೆಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿದೆ. ರಸ್ತೆಗಳು ಹದಗೆಟ್ಟು ಹೋಗಿವೆ. ಹೀಗಾಗಿ ಕೂಡಲೇ ರೈತರಿಗೆ ಪರಿಹಾರ ನೀಡಬೇಕು. ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರವೇ ಪ್ರಮುಖ ಸಿದ್ದಲಿಂಗರಡ್ಡಿ ಮುದಗಲ್ ಮಾತನಾಡಿದರು. ಕರವೇ ಯುವ ಘಟಕ ಅಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ, ಮುಖಂಡರಾದ ಸಂತೊಷಕುಮಾರ ನಿರ್ಮಲ್ಕರ್, ಚೌಡಯ್ಯ ಬಾವೂರ್, ವಿಶ್ವರಾಜ ಹೊನಗೇರಾ, ವೆಂಕಟೇಶ ಬೈರಿಮಡ್ಡಿ, ಅಬ್ದುಲ್ ಚಿಗಾನೋರ, ಶರಣಬಸಪ್ಪ ಯಲ್ಹೇರಿ, ಬಸವರಾಜ ತಳವಾರ, ಶರಣಪ್ಪ ದಳಪತಿ, ಸಂತೋಷ ಚಾಮನಾಳ, ಸಲೀಂ ಯರಗೋಳ, ಸಿದ್ದಪ್ಪ ಕ್ಯಾಸಪನಳ್ಳಿ, ಸಾಹೇಬಗೌಡ ನಾಯಕ, ಸುರೇಶ ಬೆಳಗುಂದಿ, ಸಿದ್ದು ಪೂಜಾರಿ, ಹಣಮಗೌಡ ಶಖಾಪುರ, ಅಬ್ದುಲ್ ರೀಯಾಜ್ ಇತರರಿದ್ದರು.