ಕಲಬುರಗಿಯಲ್ಲಿ ಪಿಎಫ್ ಐ ಜಿಲ್ಲಾ ಅಧ್ಯಕ್ಷ ವಶಕ್ಕೆ

IMG-20220922-WA0032
Published on

ಕಲಬುರಗಿ: ನಗರದ ಹಾಗರಗಾ ಕ್ರಾಸ್ ಬಳಿಯ ಮನೆ ಮೇಲೆ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದು, ಪಿಎಫ್ಐ ಅಧ್ಯಕ್ಷ ಎಜಾಜ್ ಅಲಿಯನ್ನು ವಶಕ್ಕೆ ಪಡೆದಿದ್ದು, ರಾಜ್ಯ ಸದಸ್ಯ ಶಾಹೀದ್ ನಾಸೀರ್ ನಾಪತ್ತೆ ಆಗಿದ್ದಾನೆ ಎನ್ನಲಾಗಿದೆ.

ಗುರುವಾರ ನಸುಕಿನ ಜಾವ 3.30ಗಂಟೆ ಸುಮಾರಿಗೆ ಪಿಎಫ್ ಐ ಜಿಲ್ಲಾಧ್ಯಕ್ಷ ಏಜಾಜ್ ಅಲಿ ಮತ್ತು ರಾಜ್ಯ ಸದಸ್ಯ ಶಾಹೀದ್ ನಾಸೀರ್ ಅವರ ಮನೆ ಮೇಲೆ ದಾಳಿ ನಡೆಸಿದ್ದು, 14 ಲಕ್ಷ ರೂ, 17 ಮೊಬೈಲ್, ಲ್ಯಾಪಟಾಪ್, ಪಿಎಫ್ಐ ಸಂಘಟನೆಗೆ ಸಂಬಂಧಿಸಿದ ಹಲವು ದಾಖಲಾತಿ ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ನಂತರ ಏಜಾಜ್ ಅಲಿಯನ್ನು ಬಂಧಿಸಿ ಕರೆದುಕೊಂಡು ಹೋಗುವಾಗ ಪಿಎಫ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಪೊಲೀಸರ ಬಿಗಿ ಬಂಧೋಬಸ್ತ್ ಮಧ್ಯೆ ಏಜಾಜ್ ಅಲಿಯನ್ನು ಕರೆದುಕೊಂಡು ಹೋಗಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net