ಕಲಬುರಗಿಯಲ್ಲಿ ದಲಿತರ ಶಕ್ತಿ ಪ್ರದರ್ಶನ : ಬೃಹತ್ ಪ್ರತಿಭಟನೆ

IMG-20230809-WA0004
Published on

ಸಾಗರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ | ಮಣಿಪುರ ಮಹಿಳೆ ಬೆತ್ತಲೆ ಮೆರವಣಿಗೆ, ಬಾಲೆಯ ಹತ್ಯಾಚಾರ, ಖರ್ಗೆ ಬಣ್ಣ ನಿಂದನೆೆ ಖಂಡಿಸಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಣಿಪುರದಲ್ಲಿ ಕುಕಿ ಸಮುದಾಯ ಮಹಿಳೆಯರ ಬೆತ್ತಲೆ ಮೆರವಣಿಗೆ, ಆಳಂದ ತಾಲೂಕು ಸೇರಿದಂತೆ ರಾಜ್ಯದಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಅಮಾನುಷ ಘಟನೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಲ್ಯಾಣ ಕರ್ನಾಟಕದ ಜನರ  ಕಪ್ಪು ಬಣ್ಣ ಎಂದು ನಿಂಧನೆ ಮಾಡಿದ್ದನ್ನು ಖಂಡಿಸಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.
ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ ದಸಂಸ ಕಾರ್ಯಕರ್ತರು ನಗರದ ಜಗತ್ ವೃತ್ತದಲ್ಲಿ ಜಮಾಗೊಂಡು ಅಲ್ಲಿಂದ  ರಾಜ್ಯ ಸಂಚಾಲಕ ಡಿ.ಜಿ.ಸಾಗರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಮಾನವ ಸರಪಳಿ ನಿರ್ಮಿಸಿದರು. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಮೆರವಣಿಗೆ ನಡೆಸಿದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕರೆಯಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ  ತಡೆಯುವಲ್ಲಿ ಅಲ್ಲಿನ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಸೌಜನ್ಯ ಹತ್ಯೆ ನಡೆದು ೧೧ ವರ್ಷವಾದರೂ ಆರೋಪಿಗಳ ಬಂಧನವಾಗಿಲ್ಲ. ಆಳಂದ ತಾಲೂಕಿನ ಹಳ್ಳಿಯಲ್ಲಿ  ಬಾಲಕಿಯ ಹತ್ಯಾಚಾರ ನಡೆದಿದೆ ಇದು ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು  ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು  ಒಕ್ಕೋರಲಿನಿಂದ ಆಗ್ರಹಿಸಿದರು.
ಜಗತ್ ವೃತ್ತದಿಂದ ಜಿಇಲ್ಲಾಧಿಕಾರಿಗಳ ಆಗಮಿಸಿ ಅಲ್ಲಿ ಸುಮಾರು ಹೊತ್ತು ಪ್ರತಿಭಟನಾ ಪ್ರದರ್ಶನ ನಡೆಸಿದರು. ಬಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳಿಗೆ   ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಹೆಚ್ಚುವರಿ ಡಿಸಿ ರಾಯಪ್ಪ ಅವರು ಮನವಿ ಸ್ವೀಕರಿಸಿದರು.
ಹೋರಾಟವನ್ನು ಬೆಂಬಲಿಸಿ ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ, ದಸಂಸ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ, ಪ್ರಮುಖರಾದ ರಾಜು ಸಂಕಾ, ಎಸ್.ಪಿ.ಸುಳ್ಳದ,ಅಂಬಣ್ಣ ಜೀವಣಗಿ,, ಎಸ್.ಎಂ.ಪಟ್ಟಣಕರ್, ಕೃಷ್ಣಪ್ಪ ಕರ್ಣಿಕ, ಉಮೇಶ ನರೋಣಾ, ಮಹಾದೇವ ತರನಳ್ಳಿ, ಎಚ್. ಶಂಕರ, ಮಹಾಲಿಂಗ ಅಂಗಡಿ, ಶಶಿಕಾಂತ ಮಾನೆ, ಸುಭಾಷ ಡಾಂಗೆ, ದೇವೇಂದ್ರ ಹೆಗ್ಗಡೆ, ರಾಜು ಗಂಗಾಕರ,ಬಿ.ಸಿ.ವಾಲಿ, ರೇವಣಸಿದ್ದ ಜಾಲಿ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net