ಕಲಬುರಗಿಯಲ್ಲಿ ಗಾಳಿ ಮಳೆಗೆ ಧರೆಗುರುಳಿದ ಮರ

1905klb16
Published on

ಕಲಬುರಗಿ: ನಗರ ಸೇರಿ ಜಿಲ್ಲಾದ್ಯಂತ ಭಾನುವಾರ ತಡರಾತ್ರಿ ಆರಂಭವಾದ ಮಳೆಯೂ ಸೋಮವಾರ ನಸುಕಿನ ಜಾವದವರೆಗೆ ಸುರಿದಿದ್ದು, ನಗರದ ವಿವಿಧೆಡೆ ಭಾರಿ ಮರಗಳು ಧರೆಗೆ ಉರುಳಿದ್ದು, ಜಿಲ್ಲೆಯ ವಿವಿಧೆಡೆ ಜಮೀನುಗಳಲ್ಲಿ ನೀರು ನಿಲ್ಲುವ ಮಟ್ಟಕ್ಕೆ ಮಳೆ ಸುರಿದಿದೆ.

ಕಲಬುರಗಿ, ಕಮಲಾಪುರ, ಅಜಲಪುರ, ಚಿತ್ತಾಪುರ, ಚಿಂಚೋಳಿ, ಜೇರ‍್ಗಿ ಸೇರಿ ಭಾಗಶ@ ಇಡೀ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಭಾನುವಾರ ತಡರಾತ್ರಿಯಿಂದ ಸೋಮವಾರ ನಸುಕಿನ ಜಾವದವರೆಗೆ ಮಳೆ ಸುರಿದಿದ್ದು, ಅಲ್ಲಲ್ಲಿ ಮನೆ, ಮರಗಳು ಉರುಳಿದ ಟನೆಗಳು ಸಂಭವಿಸಿದೆ.

ಗುಡುಗು ಸಹಿತ ಭಾರಿ ಮಳೆಗೆ ನಗರದ ಬಿದ್ದಾಪುರ ಕಾಲನಿ, ವಿಠಲ್​ ನಗರ ಸೇರಿ ವಿವಿಧೆಡೆ ಬೃಹತ್​ ಮರಗಳು ಧರೆಗೆ ಉರುಳಿದ್ದು, ಜನರ ಸಂಚಾರಕ್ಕೆ ತೊಡಕ್ಕಾಗಿತ್ತು. ವಿಠಲ ನಗರದಲ್ಲಿ ಬಿದ್ದ ಮರದಿಂದ ಪಕ್ಕದ ಮನೆಯ ಛಾವಣಿಯ ಕುಸಿದು ಬಿದ್ದಿದ್ದು, ಕಂಪೌಡ್​ ಗೋಡೆ ಒಡೆದಿದೆ.

ತಡರಾತ್ರಿ ಮನೆ ಹೊರಗೆ ಯಾರೂ ಇಲ್ಲದ್ದಕ್ಕೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮರ ಉರುಳಿದ್ದರಿಂದ ಬಿದ್ದಾಪುರ ಕಾಲನಿ ರಸ್ತೆ, ಆನಂದ ಹೊಟೇಲ್​ ವೃತ್ತದಿಂದ ಡಾ.ಎಸ್​.ಎಂ.ಪಂಡಿತ ರಂಗಮಂದಿರಕ್ಕೆ ಸಂರ‍್ಕಿಸುವ ರಸ್ತೆಗಳು ಸಂಪರ‍್ಣ ಬ್ಲಾಕ್​ ಆಗಿದ್ದವು. ಕೆಲ ಗಂಟೆಗಳ ನಂತರ ಮರಗಳನ್ನು ಕಟಾವು ಮಾಡಿ, ತೆರವುಗೊಳಿಸಿದ ನಂತರ ರಸ್ತೆ ಸಂಚಾರಕ್ಕೆ ಮುಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net