ಕಲಬುರಗಿಯಲ್ಲಿ ಕಳ್ಳರ ಅಟ್ಟಹಾಸ

Crime Logo
Published on

ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಇಎಸ್​ಐ ಆಸ್ಪತ್ರೆ ಮುಂಭಾಗದಲ್ಲಿನ ಅಂಗಡಿಗಳ ಬೀಗ ಮುರಿದು ಸರಣಿಗಳ್ಳತನ ಮಾಡಿದ ಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ರಾಮ ಮಂದಿರ ಸಮೀಪದ ರಿಂಗ್​ ವೃತ್ತದಲ್ಲಿ ಅಂಗಡಿಗಳ ಸರಣಿಗಳ್ಳತನವಾಗಿತ್ತು.

ಅದರ ಬೆನ್ನಲ್ಲೇ ಕಳ್ಳರ ಕೈಚಳಕ ಮುಂದುವರಿದಿದ್ದು, ಜನರು ಕಂಗಾಲಾಗಿದ್ದಾರೆ.

ಇಎಸ್​ಐ ಆಸ್ಪತ್ರೆ ಮುಂಬಾಗದಲ್ಲಿರುವ ಶಾಂತಗೌಡ ಜವಳಗಿ ಅವರ ಪಾರ್ವತಿ ಮೆಡಿಕಲ್​ ಸೇರಿದಂತೆ ಕೆಲ ಅಂಗಡಿಗಳ ಪತ್ರಾಸ್​ಗಳನ್ನು ಕೊರೆದು, ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮೆಡಿಕಲ್​ನಲ್ಲಿದ್ದ ೪೫ ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ. ರಾಮ ಮಂದಿರ ಬಳಿಯ ರಿಂಗ್​ ವೃತ್ತ ಹಾಗೂ ಸೇಡಂ ರಸ್ತೆಯ ಅಂಗಡಿಗಳಲ್ಲಿ ನಡೆದ ಸರಣಿಗಳ್ಳತನ ಪರಸ್ಪರ ಹೋಲಿಕೆಯಾಗುತ್ತಿದ್ದು, ಒಂದೇ ಗ್ಯಾಂಗಿನವರು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಗಸ್ತು, ಕಳ್ಳರನ್ನು ಪತ್ತೆ ಹಚ್ಚುವಲ್ಲಿ ವೈಲ್ಯದ ಹಿನ್ನೆಲೆಯಲ್ಲಿ ಪದೇ ಪದೆ ಟನೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಗುಲ್ಬರ್ಗ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಬಸವೇಶ್ವರ ಆಸ್ಪತ್ರೆ ಸಮೀಪದ ಸ್ವದೇಶಿ ಮಳಿಗೆಯಲ್ಲೂ ಪತ್ರಾಸ್​ ಕೊರೆದು ಕಳ್ಳತನ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net