ಕಲಬುರಗಿಯಲ್ಲಿ ಕರೊನಾ ಸ್ಫೋಟ

Published on

ಕಲಬುರಗಿ: ಜಿಲ್ಲೆಯಲ್ಲಿ ದಿನೇ ದಿನೆ ಕೊರೋನಾ ಪ್ರಕರಣ ಹೆಚ್ಚುತ್ತಿದ್ದು, ಶನಿವಾರ125ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ವಾರದಲ್ಲೇ ಶೇ.4ರಷ್ಟು ಪಾಸಿಟಿವಿಟಿ ದರ ತಲುಪಿದೆ. ರಾಜ್ಯದಲ್ಲಿ ಅತೀ ಹೆಚ್ಚು ವೇಗವಾಗಿ ಕರೊನಾ ಹರಡುತ್ತಿರುವ ಡೇಂಜರ್ ಜಿಲ್ಲೆಯಲ್ಲಿ ಕಲಬುರಗಿ ಸೇರ್ಪಡೆಯಾಗಿದ್ದು, ಪಕ್ಕದ ಯಾದಗಿರಿ ಜಿಲ್ಲೆಯಲ್ಲೂ ಭಾನುವಾರ 17 ಜನರಿಗೆ ಕೊರೋನಾ ಕಂಡು ಬಂದಿದೆ. ಬೀದರ್ ಜಿಲ್ಲೆಯಲ್ಲಿ ಹೊಸದಾಗಿ 21 ಮಂದಿಗೆ ಕರೊನಾ ಸೋಂಕು ತಗುಲಿದೆ.

ಕಲಬುರಗಿಯಲ್ಲಿ ಭಾನುವಾರ  ವಾರಾಂತ್ಯ ಲಾಕ್ಡೌನ್  ವೇಳೆ ಕಂಡು ಬಂದ ಖಾಲಿ ರಸ್ತೆಗಳು.
ಕಲಬುರಗಿಯಲ್ಲಿ ಭಾನುವಾರ ವಾರಾಂತ್ಯ ಲಾಕ್ಡೌನ್ ವೇಳೆ ಕಂಡು ಬಂದ ಖಾಲಿ ರಸ್ತೆಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net