

ಕಲಬುರಗಿ: ಶುಭ ವಾರವಾಗಬೇಕಿದ್ದ ಶುಕ್ರವಾರ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ಕರಾಳ ದಿನವಾಗಿ ಮಾರ್ಪಟ್ಟಿದೆ. ಇಂದು ಒಂದೇ ದಿನ ಈ ಮೂರು ಜಿಲ್ಲೆಗಳಲ್ಲಿ 183 ಕರೊನಾ ಪಾಸಿಟಿವ್ ಕೇಸ್ಗಳು ದೃಢಪಟ್ಟಿದ್ದು, ಈ ಎಲ್ಲದ್ದಕ್ಕೆ ಮಹಾರಾಷ್ಟ್ರ ಲಿಂಕ್ ಇದೆ.
ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಮತ್ತೊಮ್ಮೆ ಕರೊನಾ ಮಹಾಸ್ಫೋಟ ಸಂಭವಿಸಿದೆ. ಇದುವರೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಂಕಿ-ಸಂಖ್ಯೆ ವರದಿಯಾಗಿರಲಿಲ್ಲ. ನಗರ, ಪಟ್ಟಣ ಪ್ರದೇಶಗಳ ಜತೆಗೆ ಗ್ರಾಮೀಣ ಭಾಗಕ್ಕೂ ವೈರಸ್ ಲಗ್ಗೆ ಇಟ್ಟಿದೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕರೊನಾ ದ್ವಿಶತಕದ ಗಡಿ ದಾಟಿ ಮುನ್ನಡೆದರೆ, ರಾಯಚೂರು ಶತಕದ ಗಡಿ ದಾಟಿದೆ.
ಕಲಬುರಗಿ ಜಿಲ್ಲೆಯಲ್ಲಿ ಇಂದು 61 ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 251ಕ್ಕೇರಿದೆ. ಯಾದಗಿರಿ ಜಿಲ್ಲೆಯಲ್ಲಿ 60, ರಾಯಚೂರು ಜಿಲ್ಲೆಯಲ್ಲಿ 62 ಪ್ರಕರಣ ಹೊಸದಾಗಿ ಸೇರ್ಪಡೆಯಾಗಿವೆ.
ದುಡಿಯಲು ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದವರು ಈಗ ಮರಳಿ ಬಂದಿದ್ದು, ಅವರನ್ನೆಲ್ಲ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ. ಅಲ್ಲಿಂದಲೇ ಗಂಟಲ ದ್ರವ ಪರೀಕ್ಷೆ ಮಾಡಿಸಿದಾಗ ಬಹುತೇಕರಿಗೆ ಕರೊನಾ ಅಂಟಿರುವುದು ಖಚಿತವಾಗಿದೆ. ಸಂಖ್ಯೆ ಹೆಚ್ಚಳಕ್ಕೂ ಇದೇ ಕಾರಣ ಎನ್ನಲಾಗುತ್ತಿದೆ. ಕಲಬುರಗಿಯಲ್ಲಿ ವರದಿಯಾದ 61 ಪ್ರಕರಣಗಳಲ್ಲಿ 12 ಮಕ್ಕಳು ಮತ್ತು 30 ಮಹಿಳೆಯರು ಸೇರಿದ್ದಾರೆ. ಅಲ್ಲದೆ 10 ರೋಗಿಗಳು ಗುಣವಾಗಿ ಮನೆಗಳಿಗೆ ತೆರಳಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 28,589 ಜನ ಶಂಕಿತರ ರಕ್ತ, ಗಂಟಲು ಕ ಟೆಸ್ಟ್ಗೆ ಕಳುಹಿಸಲಾಗಿದ್ದು, 19,046 ಜನರ ನೆಗೆಟಿವ್ ರಿಪೋಟರ್್ ಬಂದಿದೆ. 9292 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಒಟ್ಟು 39 ಕಂಟೇನ್ಮೆಂಟ್ ಜೋನ್ಗಳಿದ್ದು ಅವುಗಳಲ್ಲಿ 20 ಸಕ್ರೀಯವಾಗಿವೆ. ಈ ಜೋನ್ಗಳಡಿ 52551 ಮನೆಗಳ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ.
ಪ್ರೈಮರಿ ಕಾಂಟ್ಯಾಕ್ಟ್ಸ್ 1420, ಸೆಕಂಡರಿ ಕಾಂಟ್ಯಾಕ್ಟ್ಸ್ 4679, ವಿದೇಶದಿಂದ ಬಂದವರು 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 293 ಜನರನ್ನು ಇರಿಸಲಾಗಿದೆ. ಈವರೆಗೆ 28 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 3479 ಜನರನ್ನು ಮುಕ್ತಗೊಳಿಸಲಾಗಿದೆ. 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 1839 ಜನರನ್ನು ಮುಕ್ತಗೊಳಿಸಿ ಈ ನಂತರವೂ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣ ಸ್ವಯಂ ಪ್ರೇರಣೆಯಿಂದ ವರದಿ ಮಾಡುವಂತೆ ಸೂಚಿಸಲಾಗಿದೆ. 66 ಜನರನ್ನು ಇಎಸ್ಐಸಿ ಐಸೋಲೇಟೆಡ್ ವಾಡರ್್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.