

ಕಲಬುರಗಿ: ಜಿಲ್ಲೆಯಲ್ಲಿ ಕರೊನಾ 2ನೇ ಅಲೆ ಏರುಗತಿಯಲ್ಲಿದ್ದು, ಬುಧವಾರ ಮತ್ತೇ 205 ಪ್ರಕರಣಗಳು ಕಾಣಿಸಿಕೊಂಡು, ಇಬ್ಬರು ವೃದ್ಧೆಯರು ಮೃತಪಟ್ಟಿದ್ದಾರೆ. ಬುಧವಾರದ ಎರಡು ಸಾವು ಸೇರಿ ಮೃತರ ಸಂಖ್ಯೆ 355ಕ್ಕೇರಿದಂತಾಗಿದೆ. 135 ಜನ ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ.
ಈವರೆಗೆ ಒಟ್ಟು 25186 ಸೋಂಕಿತರಾಗಿದ್ದು, ಒಟ್ಟು 23275 ಜನ ಚೇತರಿಸಿಕೊಂಡಿದ್ದಾರೆ. ಪ್ರಸಕ್ತ 1556 ಸಕ್ರೀಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಕರೊನಾ ಟೆಸ್ಟಿಂಗ್ನಲ್ಲಿ ಹೆಚ್ಚಳ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಸಂಪೂರ್ಣ ತೊಡಗಿಸಿಕೊಂಡಿದೆ. ಸಕರ್ಾರಿ ರಜೆ ದಿನದಂದೂ ಸಿಬ್ಬಂದಿಗೆ ರಜೆ ನೀಡುತ್ತಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಇಬ್ಬರು ಸಾವು
ಸೋಂಕಿನಿಂದ ಕಲಬುರಗಿ ನಗರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಬುಧವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.
ಸಾರಿ ಹಿನ್ನೆಲೆ ಜತೆಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದ ಮೋಮಿನಪುರದ 75 ವರ್ಷದ ವೃದ್ಧೆ ಮಾ.29 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ, ಏ.6 ರಂದು ನಿಧನ ಹೊಂದಿದ್ದಾರೆ. ಸಾರಿ ಹಿನ್ನೆಲೆಯಿಂದ ಮಿಲ್ಲತ್ ನಗರದ 60 ವರ್ಷದ ವೃದ್ಧೆ ಏ.5 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ, ಏ.6 ರಂದು ನಿಧನ ಹೊಂದಿದ್ದಾರೆ.
ವಿಶ್ವ ಆರೋಗ್ಯ ದಿನದ ಹಿನ್ನೆಲೆಯಲ್ಲಿ ಎಲ್ಲರೂ ಆರೋಗ್ಯವಾಗಿರಬೇಕು. ಇಡಿ ವಿಶ್ವಕ್ಕೆ ಒಕ್ಕರಿಸಿದ ಕರೊನಾ ಮೆಟ್ಟಿನಿಲ್ಲಲು ಸಾರ್ವಜನಿಕರ ಸಹಕಾರ ಅಗತ್ಯವಿದೆ. ಹೀಗಾಗಿ ಸಾರ್ವಜನಿಕರು ಜಾಗೃತರಾಗಬೇಕಿದ್ದು, ಮಾಸ್ಕ್ ಧರಿಸಿ, ಗುಂಪಾಗಿ ತಿರುಗುವುದನ್ನು ಬಂದ್ ಮಾಡಬೇಕು. ಅಪಾಯಕಾರಿ ಸ್ಥಿತಿಗೆ ತಲುಪುವ ಮುನ್ನ ಎಚ್ಚರಿಕೆ ವಹಿಸಬೇಕು.
ಡಾ.ಶರಣಬಸಪ್ಪ ಗಣಜಲಖೇಡ,
ಜಿಲ್ಲಾ ಆರೋಗ್ಯಾಧಿಕಾರಿ, ಕಲಬುರಗಿ.