

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ಘಟಕ-೨ ಮತ್ತು ಘಟಕ-೩ ರಿಂದ ಕಾರ್ಯಾಚರಣೆಯಾಗುವ ಕಲಬುರಗಿ ಉಪನಗರ ಸಾರಿಗೆಗಳ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಉಪನಗರ ಸಾರಿಗೆಗಳನ್ನು ಕಾರ್ಯಾಚರಣೆಯಾಗುವ ಸರತಿಗಳನ್ನು ಕಲಬುರಗಿ ನಗರದಲ್ಲಿ ನಿಲುಗಡೆಗೆ ಅವಕ್ಯಶ ಕಲ್ಪಿಸಲಾಗಿದೆ ಎಂದು ಕಲಬುರಗಿ ವಿಭಾಗ-೨ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೂಪರ ಮಾರ್ಕೆಟ್‌ಯಿಂದ ಇಟಗಾ,ಕಾಳನೂರ,ಸರಡಗಿ,ಖಾಜಾ ಕೂಟನೂರ,-ಬಳವಾಡ,ಕಮಕನೂರ, ಭೂಪಾಲ ತೆಗನೂರ, ತರನಳ್ಳಿ,ಬಸವನ ತಾಂಡ, ಸಿತನೂರ, ಝಾಪೂರ, ಹುಣಸಿ ಹಡಗಲ್, ಖಣದಾಳ, ಕೆರೆಅಂಬಲಗಾವರಗೆ. ಬಂಬೂ ಬಜಾರಯಿಂದ ಕಲ್ಲಹಂಗರಗಾ,ಅಸ್ಟಗ ಸಂಗೋಳಗಿ, ಅಂಬಲಗಾ, ಗಣಜಲಖೇಡ, ಜಮಗಾ, ಕುಮಸಿ, ಕೊಟರಗಾ, ಅಸ್ಟಗಾ ವರಗೆ. ನೇಹರು ಗಂಜ್‌ಯಿಂದ ಹೆಬ್ಬಾಳ-ಬನ್ನೂರ-ಬೇಲ್ಲೂರ-ಕುದಮುಡ ತಾಂಡ-ಕಡಬೂರ-ತೊಂಡಕಲ್- ಬಬಲಾದವರೆಗೆ ನಿಲುಗಡೆಗೆ ಅವಕ್ಯಶ ಕಲ್ಪಿಸಲಾಗಿದೆ.
ಈ ಎಲ್ಲಾ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಎಲ್ಲಾ ಉಪನಗರ ಸಾರಿಗೆಗಳು ನಗರ ಸಾರಿಗೆಗಳಂತೆ ನಗರ ಸಾರಿಗೆಯ ಪ್ರಯಾಣ ದರದಲ್ಲಿಯೇ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹಂತಗಳನ್ನು ಅಳವಡಿಸಿ ನಿಲುಗಡೆ ಕಲ್ಪಿಸಲಾಗಿದೆ ಆದುದರಿಂದ ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆಗಳ ಸದಾವಕಾಶವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ