ಕಲಬುರಗಿಯಲ್ಲಿ ಎರಡು ಬಿಜೆಪಿ, 7 ಕಾಂಗ್ರೆಸ್ ಗೆಲುವು

IMG-20230513-WA0179
Published on

ಕಲಬುರಗಿ: ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ತೀವ್ರ ಪೈಪೋಟಿಯ ಮಧ್ಯೆ ಕಾಂಗ್ರೆಸ್ ಏಳು ಸ್ಥಾನಗಳನ್ನು ಪಡೆದಿದ್ದು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಚಿಂಚೋಳಿಯಲ್ಲಿ ಬಿಜೆಪಿಯ ಡಾ.ಅವಿನಾಶ ಜಾಧವ್, ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಮತ್ತಿಮಡು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆಳಂದನಲ್ಲಿ ಬಿ.ಆರ್.ಪಾಟೀಲ್, ಅಫಜಲಪುರದಲ್ಲಿ ಎಂ.ವೈ.ಪಾಟೀಲ್, ಜೇವರ್ಗಿಯಲ್ಲಿ ಡಾ.ಅಜಯಸಿಂಗ್, ಚಿತ್ತಾಪುರದಲ್ಲಿ ಪ್ರಿಯಾಂಕಾ ಖರ್ಗೆ, ಕಲಬುರಗಿ ದಕ್ಷಿಣದಲ್ಲಿ ಅಲ್ಲಮಪ್ರಭು ಪಾಟೀಲ್, ಕಲಬುರಗಿ ಉತ್ತರದಲ್ಲಿ ಕನೀಜ್ ಫಾತಿಮಾ ಗೆಲುವು ಸಾಧಿಸಿದ್ದಾರೆ.
ಖರ್ಗೆ ಕಾಂಗ್ರೆಸ್ ರಾಷ್ಟಿçÃಯ ಅಧ್ಯಕ್ಷರಾದ ನಂತರ ಅವರ ತವರು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಗೆಲುವು ದೊರಕಿದ್ದು, ಬಿಜೆಪಿಗೆ ಬಹುದೊಡ್ಡ ಹೊಡೆತ ಬಿದ್ದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net