ಕಲಬುರಗಿಯ ಅಪ್ಪನ ಕೆರೆಯ ಸುತ್ತಮುತ್ತ ನಿಷೇಧಿತ ಪ್ರದೇಶ ಘೋಷಿಸಿದ ಪಾಲಿಕೆ ಆಯುಕ್ತರು

Kerwad Lake
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಶರಣಬಸವೇಶ್ವರ (ಅಪ್ಪನ) ಕೆರೆ ಸುತ್ತಮುತ್ತಲೂ ಗ್ರಿಲ್ ಅಳವಡಿಸಿ, ಬೇಲಿ ಹಾಕಿ ಅಪಾಯಕಾರಿ ನಿಷೇಧಿತ ಪ್ರದೇಶವಾಗಿ ಘೋಷಣೆ ಮಾಡಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ದೇವಿದಾಸ್ ತಿಳಿಸಿz್ದÁರೆ.
ಸಾರ್ವಜನಿಕರು ಹಾಗೂ ದನ/ ಎಮ್ಮೆ ಮೇಯಿಸುವವರು ಈ ಕೆರೆಯ ಸುತ್ತಮುತ್ತಲಿನ ಬೇಲಿ ದಾಟಿ ಅಕ್ರಮವಾಗಿ ಪ್ರವೇಶ ಮಾಡಬಾರದು. ಈ ಕುರಿತು ಸುತ್ತಮುತ್ತಲಿನ ಬೇಲಿಗೆ ನಿಷೇಧಿತ ಪ್ರದೇಶ ಎಂದು ನಾಮಫಲಕ ಸಹ ಅಳವಡಿಸಿದೆ.
ಎಫ್‌ಐಆರ್ ದಾಖಲು
ಇತ್ತೀಚೆಗೆ ಅಪ್ಪನ ಕೆರೆಯ ಬೇಲಿ ಗ್ರಿಲ್ ಕಟ್ ಮಾಡಿ ಹಾಳು ಮಾಡಿದ್ದೂ ಅಲ್ಲದೇ ಕೆರೆಯ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಎಮ್ಮೆಗಳನ್ನು ಒಳಗೆ ಬಿಟ್ಟವರ ವಿರುದ್ಧ ನಗರದ ಬ್ರಹ್ಮಪೂರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಪ್ಪನ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ನಿಷೇಧ  ಮತ್ತು ಅಪಾಯಕಾರಿ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಇದನ್ನು ಗಮನಿಸಬೇಕು ಎಂದು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net