

ಕಲಬುರಗಿ: ನಗರದ ಪಿಡಿಎ ಎಂಜಿನಿಯರಿAಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಮೇ ೪ರಂದು ಮಧ್ಯಾಹ್ನ ೩.೧೫ಕ್ಕೆ ಬಿಜೆಪಿಯಿಂದ ಪ್ರಬುದ್ಧರ ಜತೆ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸದಸ್ಯೆ ಡಾ.ಸುಧಾ ಹಾಲಕಾಯಿ ಹೇಳಿದರು. ಸಂವಾದದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯP್ಷÀ ಅಣ್ಣಾಮಲೈ ಭಾಗವಹಿಸಲಿz್ದÁರೆ. ವೈದ್ಯರು, ಶಿP್ಷÀಕರು, ವಕೀಲರು, ಸಿಎ, ಉದ್ಯಮಿಗಳು, ಆರ್ಥಿಕ ತಜ್ಞರು, ಮಿಲ್ಕ್ ಅಸೋಸಿಯೇಷನ್ ಸೇರಿ ವಿವಿಧ ವಲಯದವರು ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂವಾದದ ಆಹ್ವಾನಿತರಿಗೆ ಪಾಸ್ ನೀಡಲಾಗುತ್ತಿದ್ದು, ಪಾಸ್‌ಗಾಗಿ ೯೪೪೯೮೩೮೭೫೮ಗೆ ಸಂಪರ್ಕಿಸಬೇಕು. ಈಗಾಗಲೇ ಎಲ್ಲ ಪ್ರಕೋಷ್ಠಗಳ ಸಮಾವೇಶ ಮಾಡಿದ್ದು, ಬಹುತೇಕರು ಮೋದಿ ಪರಿಹಾರಕ್ಕೆ ಕೈ ಜೋಡಿಸುತ್ತಿದ್ದಾರೆ ಎಂದು ಹೇಳಿದರು. ಪ್ರಮುಖರಾದ ಡಾ.ಅಲ್ಲಮಪ್ರಭು ಗುಡ್ಡಾ, ಗಿರಿರಾಜ ಯಳಮೇಲಿ, ವಿಶ್ವಾರಾಧ್ಯ ಇಜೇರಿ, ಡಾ.ಜ್ಯೋತಿ ಪಾಟೀಲ್ ಇತರರಿದ್ದರು.