ಕಲಬುರಗಿ: ಹೊಟೇಲ್ ಕೀಲಿ ಮುರಿದು ಕಳ್ಳತನ

Crime Logo
Published on

ಕಲಬುರಗಿ: ಸೂಪರ ಮಾರ್ಕೆಟ್‌ನ ಕಪಡಾ ಬಜಾರ ಹಳೇ ಮಾರ್ಕೆಟ್ ಕಾರ್ಪೋರೇಶನ್ ಕಾಂಪ್ಲೆಕ್ಸ್ನ ನೆಲ ಮಹಡಿಯಲ್ಲಿನ ಹೊಟೇಲ್‌ನಲ್ಲಿ ಕಳ್ಳತನ ನಡೆದಿದೆ. ಮಹ್ಮದ್ ನೂರೊದ್ದೀನ್ ಅಬ್ದುಲ್ ಹಮೀದ್ ಹೊಟೇಲ್ ಕಳುವಾಗಿದೆ. ರಂಜಾನ್ ನಿಮಿತ್ತ ಮಾ.೨ರಿಂದ ೫ರ ವರೆಗೆ ಹೊಟೇಲ್ ಬಂದ್ ಮಾಡಿದ್ದರು. ಮಾ.೬ರಂದು ಬೆಳಗ್ಗೆ ಕಸ ಹೊಡೆಯುವ ಮಹಿಳೆ ನೋಡಿ, ಮಾಹಿತಿ ನೀಡಿದ್ದು, ಹೊಟೇಲ್ ಕೀಲಿ ಮುರಿದಿತ್ತು. ಹೊಟೇಲ್‌ನಲ್ಲಿದ್ದ ೨೦ ಲೀಟರ್‌ನ ಹಿತ್ತಾಳೆ ಬೋಗಣಿಗಳು ಸೇರಿ ಹೊಟೇಲ್ ಸಾಮಾನು ಸೇರಿ ಅಂದಾಜು ಮೌಲ್ಯ ೬೧ ಸಾವಿರ ಮೌಲ್ಯದ ಸಾಮಾನು ಕಳ್ಳತನ ಮಾಡಿದ್ದಾರೆ ಎಂದು ದೂರಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net