ಕಲಬುರಗಿ; ವೆಂಕಟೇಶ್ವರ ಮಂದಿರದಲ್ಲಿ ಗೋಪಾಲನ ಸ್ಮರಣೆ

PH 05
Published on

ಕಲಬುರಗಿ: ನ್ಯೂ ರಾಘವೇಂದ್ರ ಕಾಲನಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಬುಧವಾರ ರಾತ್ರಿ ಭಜನೆ ಸೇರಿ ಇನ್ನಿತರ ಕಾರ್ಯಕ್ರಮ ನಡೆದವು.

ಅಣ್ಣಾಚಾರ್ಯ ಕೊಂಚೂರ ಅವರು ಶ್ರೀ ಕೃಷ್ಣನ ಮಹಿಮೆ ಕುರಿತು ಪ್ರವಚನ ನೀಡಿದರು. ನಂತರ ಗೋಪಾಲಕೃಷ್ಣ ನ ಪೂಜೆ, ಭಕ್ತರಿಂದ ಶ್ರೀ ಕೃಷ್ಣನಿಗೆ ಅರ್ಘ್ಯ ಕೊಡಲಾಯಿತು. ಪ್ರಸಾದ ವಿತರಣೆ ಜರುಗಿತು.

ಶ್ರೀನಿವಾಸ ಸಿರಬೂರ, ಮೋಹನರಾವ ಚಿಮ್ಮನಚೋಡ, ಪಿ.ಎನ್.ಜೋಶಿ, ಪ್ರಾಣೇಶ ಟೆಂಗಳಿ, ರಾಘವೇಂದ್ರ ದೇಸಾಯಿ, ಬಾಬಣ್ಣ ಮೈನಾಳಕರ,ದೀಪಾ ಸಾವಳಗಿ, ವೆಂಕಟೇಶ ಕುಲಕರ್ಣಿ, ಶ್ರೀನಿವಾಸಾಚಾರ್ಯ ಜೋಶಿ ನೆಲೋಗಿ, ಜಯತೀರ್ಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net