ಕಲಬುರಗಿ ರೈತರಿಗೆ ಬೆಳೆವಿಮೆ ನೋಂದಣಿಗೆ ಜು.೩೧ ಕೊನೆ ದಿನ

Samad Patel
Published on

ಕಲಬುರಗಿ: ಮುಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್​ ಬಿಮಾ ಯೋಜನೆಯಡಿ ಬೆಳೆಗಳಿಗೆ ರೈತರು ಹತ್ತಿರದ ಗ್ರಾಮ್​-ಒನ್​, ಸಿಎಸ್​ಸಿ ಕೇಂದ್ರ, ಬ್ಯಾಂಕ್​ ಅಥವಾ ಪೋಸ್ಟ್​ ಆಫೀಸ್​ಗಳಲ್ಲಿ ನೋಂದಣಿ ಮಾಡಬೇಕು ಎಂದು ಜಂಟಿ ಕೃಷಿ ನರ‍್ದೇಶಕ ಸಮದ್​ ಪಟೇಲ್​ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಭರದಿಂದ ಸಾಗಿದ್ದು, ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಯಂತಹ ಪ್ರಕೃತಿ ವಿಕೋಪಗಳು ಹಾಗೂ ಯಾವುದೇ ಹಂತದಲ್ಲಿ ಬೆಳೆನಾಶವಾಗಬಹುದು. ಆದ್ದರಿಂದ ರೈತರು ಬಿತ್ತನೆ ಜತೆಗೆ ಬಿತ್ತಿದ ಬೆಳೆಯ ಕ್ಷೇತ್ರವನ್ನು ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್​ ಬಿಮಾ ಯೋಜನೆ ವ್ಯಾಪ್ತಿಗೆ ನೊಂದಾಯಿಸಬೇಕು. ನೋಂದಣಿ ಮಾಡಿಕೊಳ್ಳಲು ಜು.೩೧ ಕೊನೆ ದಿನವಾಗಿದೆ.

ಮೂರು ರ‍್ಷದಲ್ಲಿ ಜಿಲ್ಲೆಯಲ್ಲಿ ೫,೬೧,೦೮೨ ಲಕ್ಷ ರೈತರು ಬೆಳೆವಿಮೆ ನೋಂದಣಿ ಮಾಡಿದ್ದು, ೫೯.೩೯ ಕೋಟಿ ರೈತರ ವಂತಿಕೆ ಪಾವತಿಸಿದ್ದಾರೆ. ೯೫೪.೬೧ ಕೋಟಿ ಪರಿಹಾರಧನ ರೈತರ ಖಾತೆಗೆ ಪಾವತಿಸಲಾಗಿದೆ. ಮೂರು ರ‍್ಷದಲ್ಲಿ ರೈತರಿಗೆ ಬೆಳೆವಿಮೆ ಯೋಜನೆ ಅನುಕೂಲಕರವಾಗಿದೆ. ಜಿಲ್ಲೆಯಲ್ಲಿ ಶೇ.೯೦ ಪ್ರದೇಶ ಮಳೆಯಾಶ್ರಿತವಾಗಿದ್ದು, ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸತತವಾಗಿ ಬೆಳೆಗಳು ತುತ್ತಾಗಿರುತ್ತವೆ ಎಂದು ತಿಳಿಸಿದ್ದಾರೆ.

ಪಾವತಿಸಬೇಕಾದ ವಂತಿಗೆ ಎಕರೆಗೆ

ಬೆಳೆ ವಂತಿಗೆ ರೂ.ನಲ್ಲಿ

ಹೆಸರು(ಮ) ೨೬೯.೧೩

ಉದ್ದು (ಮ) ೨೬೫.೦೮

ತೊಗರಿ(ಮ) ೩೮೮.೫೧

ತೊಗರಿ(ನೀ) ೪೦೬.೭೨

ಹತ್ತಿ (ಮ) ೮೬೫.೭೫

ಹತ್ತಿ (ನೀ) ೧೪೯೨.೩೩

ಸೋಯಾ(ಮ) ೩೩೧.೮೫

(ಮ&ಮಳೆ, ನೀ&ನೀರಾವರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net