ಕಲಬುರಗಿ ಪ್ರಯೋಗಾಲಯ ವರದಿಯೇ ಅಂತಿಮ

2204Klb17
Published on

ಕಲಬುರಗಿ: ಕೋವಿಡ್-19 ಪರೀಕ್ಷೆ ಕುರಿತು ಇಲ್ಲಿನ ಜಿಮ್ಸ್ ಪ್ರಯೋಗಾಲಯ ನೀಡುವ ವೈದ್ಯಕೀಯ ವರದಿಯೇ ಅಂತಿಮವಾಗಿದ್ದು, ದೃಢೀಕರಣಕ್ಕಾಗಿ ಬೆಂಗಳೂರು ಅಥವಾ ಪುಣೆ ಕಳುಹಿಸುವ ಅಗತ್ಯವಿಲ್ಲ ಎಂದು ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ್ ಹೇಳಿದರು.
ಕಲಬುರಗಿ ಪ್ರಯೋಗಾಲಯ ಆರಂಭವಾದ ನಂತರ ಶಿಷ್ಠಾಚಾರದ ಪ್ರಕಾರ ಬೆಂಗಳೂರು ಅಥವಾ ಪುಣೆಗೆ ಕಳುಹಿಸಲಾಗುತ್ತಿತ್ತು. ಇದೀಗ ಈ ಪ್ರಯೋಗಾಲಯ ಉನ್ನತ್ತೀಕರಿಸಿರುವುದರಿಂದ ದೃಢೀಕರಣಕ್ಕಾಗಿ ಬೇರೆ ಪ್ರಯೋಗಾಲಯಕ್ಕೆ ವರದಿ ಕಳುಹಿಸುವ ಅಗತ್ಯವಿಲ್ಲ. ಇನ್ನೂ ಕೋವಿಡ್-19 ಪರೀಕ್ಷೆಗೆ ಅಗತ್ಯ ಪ್ರಮಾಣದಲ್ಲಿ ಕೆಮಿಕಲ್ ಸಹ ಲಭ್ಯವಿದೆ ಎಂದರು.
ಅಫಜಲಪುರ, ಜೇವರ್ಗಿ ಮತ್ತು ಚಿತ್ತಾಪುರ ತಾಲೂಕಿನ ಭೀಮಾ ನದಿ ತೀರದಲ್ಲಿನ ಗ್ರಾಮಗಳ ಬೆಳೆಗಳಿಗೆ ನೀರು ಬಿಡುಗಡೆಗೆ ಮತ್ತು ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಶಾಸಕರಾದ ಬಿ.ಜಿ.ಪಾಟೀಲ್, ದತ್ತಾತ್ರೇಯ ಪಾಟೀಲ್ರೇವೂರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ್ರದ್ದೆವಾಡಗಿ, ಮುಖಂಡ ಚಂದು ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net