ಕಲಬುರಗಿ ಪೊಲೀಸ್ ಕಮೀಷನರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

Kalaburagi Commissioner and his wife
Published on

ಕಲಬುರಗಿ: ಪೊಲೀಸ್ ಕಮಿಷನರ್ ಪತ್ನಿ ರೂಪಾಲಿಯಿಂದ ಹಣಕ್ಕೆ ಬೇಡಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕಲಬುರಗಿ ಪೊಲೀಸ್ ಕಮಿಷನರ್ ವೈ ಎಸ್ ರವಿಕುಮಾರ್ ಮತ್ತು ರೂಪಾಲಿ ವಿರುದ್ದ ದೂರು ಸಲ್ಲಿಸಲಾಗಿದೆ.

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ರಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಲಾಗಿದೆ. ಕಮಿಷನರ್ ಮತ್ತು ಕಮಿಷನರ್ ಪತ್ನಿ ರೂಪಾಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿ ಮೂರು ಲಕ್ಷ ವಸೂಲಿ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

3 ಲಕ್ಷ ಹಣ ಕೊಟ್ಟ ಬಳಿಕ ಇನ್ನೂ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ರೂಪಾಲಿ ರವಿಕುಮಾರ್, ಹಣ ಕೊಡದೆ ಇದ್ದಾಗ ಮಣಿಕಂಠ ರಾಠೋಡ್ ಗಡಿಪಾರು ಆದೇಶ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದಾಂಡಿಯಾ ನೈಟ್ ಇವೆಂಟ್ ಸಲುವಾಗಿ ಮಣಿಕಂಠ ರಾಠೋಡ್ ಬಳಿರೂಪಾಲಿ ರವಿಕುಮಾರ್ ಹಣ ಪಡೆದಿದ್ದರು ಎಂಬ ಆರೋಪವನ್ನು ಮಣಿಕಂಠ ಮಾಡಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ್ದ ಕಮೀಷನರ್ ಇವೆಂಟ್ ಮ್ಯಾನೆಜ್ಮೆಂಟ್ ಗಾಗಿ ಹಣ ಕೇಳಿರಬಹುದು ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net