

ಕಲಬುರಗಿ: ಬಡ ರೋಗಿಗಳಿಗೆ ಚಿಕಿತ್ಸೆ ನೀಡುವ ನಗರದ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಯಲ್ಲಿಯೇ ಕಳೆದ ಸುಮಾರು ೧೫ ದಿನದಿಂದ ನೀರಿಲ್ಲದೆ ರೋಗಿಗಳು, ರೋಗಿಗಳ ಸಂಬAಧಿಕರು, ಆಸ್ಪತ್ರೆ ಸಿಬ್ಬಂದಿ ಸಹ ತೀವ್ರ ಪರದಾಟ ನಡೆಸುವಂತಾಗಿದೆ.
ಇನ್ನು ನಿತ್ಯ ಸಾವಿರಾರು ಜನರು ಭೇಟಿ ನೀಡುವ, ನೂರಾರು ಒಳ ರೋಗಿಗಳು ಇರುವ ಬೃಹತ್ ಆಸ್ಪತ್ರೆಯಲ್ಲಿಯೇ ಇಂತಹ ಅವಘಡ ಸಂಭವಿಸಿದರೂ, ಆಡಳಿತ ನಡೆಸುವವರು ಮಾತ್ರ ಇಂದು ನಾಳೆ ಎಂದು ಕಥೆ ಹೇಳುತ್ತ ಕುಳಿತ್ತಿದ್ದಾರೆ.
ಸಂಕಷ್ಟದಲ್ಲಿರುವವರ ಸಮಸ್ಯೆಯನ್ನು ಆಲಿಸುವವರೇ ಇಲ್ಲದೆ ಜನರು ಅನಿವಾರ್ಯವಾಗಿ ಹೊರಗಿನಿಂದ ಹಣಕೊಟ್ಟು ನೀರು ಖರೀದಿಸುವಂಥ ಸ್ಥಿತಿ ಸೃಷ್ಟಿಯಾಗಿದೆ. ರೋಗಿಗಳ ಸಂಬAಧಿಕರು ಕ್ಯಾನ್, ಬಾಟಲ್‌ನಲ್ಲಿ ನೀರು ತರುತ್ತಿದ್ದಾರೆ. ನಿತ್ಯ ೩೦೦ಕ್ಕೂ ಹೆಚ್ಚು ಜನ ಆಸ್ಪತ್ರೆಯ ಒಪಿಡಿಗೆ ಬರುತ್ತಿz್ದÁರೆ. ಅದರಲ್ಲಿ ೩೦-೪೦ ಜನ ದಾಖಲು ಕೂಡಾ ಆಗ್ತಾರೆ. ಆದ್ರೆ ಸಧ್ಯ ಅವರಲ್ಲಿ ದೊಡ್ಡ ಆತಂಕದ ಕಾರ್ಮೋಡ ಎದುರಾಗಿದೆ.
ಶಸ್ತç ಚಿಕಿತ್ಸೆ ಸ್ಥಗಿತ: ಆಸ್ಪತ್ರೆಯ ಶಸ್ತç ಚಿಕಿತ್ಸಾ ಘಟಕದಲ್ಲೂ ನೀರಿಲ್ಲದಕ್ಕೆ ಶಸ್ತçಚಿಕಿತ್ಸೆಯನ್ನೇ ಸ್ಥಗಿತಗೊಳಿಸಿರುವ ಆಘಾತಕಾರಿ ವಿಷಯ ಹೊರ ಬಿದ್ದಿದೆ. ಕಳೆದ ಮೂರ್ನಾಲ್ಕು ದಿನದಿಂದ ವೈದ್ಯರು ಶಸ್ತç ಚಿಕಿತ್ಸೆ ಮಾಡುವುದನ್ನೇ ಸ್ಥಗಿತಗೊಳಿಸಿದ್ದಾರೆ. ತುರ್ತು ಎನ್ನುವಂತ ಶಸ್ತç ಚಿಕಿತ್ಸೆ ಹೊರತುಪಡಿಸಿದರೆ ಸಂಪೂರ್ಣ ಆಪರೇಷನ್ ಥೇಟರ್ ಬಂದ್ ಮಾಡಲಾಗಿದೆ. ಹೊರಗಿನಿಂತ ನೀರು ತಂದು ನಿರ್ವಹಣೆ ಕಷ್ಟ ಆಗುತ್ತಿದೆ. ಸಂಪೂರ್ಣ ನೀರು ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಇಡೀ ಆಸ್ಪತ್ರೆ ರೋಗಗಳ ಆವಾಸ ಸ್ಥಾನವಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಾಕ್ಸ್
ತುರ್ತು ಬಳಕೆಗೆ ಡ್ರಮ್ ಭರ್ತಿ
ಜಯದೇವ ಮತ್ತು ಜಿಮ್ಸ್ ಆಸ್ಪತ್ರೆಯಲ್ಲಿ ಹನೀ ನೀರಿಲ್ಲದಕ್ಕೆ ಆಸ್ಪತ್ರೆಯಲ್ಲಿ ತುರ್ತು ಬಳಕೆಗೆ ಡ್ರಮ್‌ಗಳನ್ನು ಭರ್ತಿ ಮಾಡಿ ಇಡಲಾಗಿದೆ. ಆದರೆ ಇದರಿಂದ ಶೌಚಗೃಹ, ಸಾರ್ವಜನಿಕ ಬಳಕೆಗೆ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಡ್ರಮ್‌ನಲ್ಲಿನ ನೀರು ಹೇಗೆ ಬಳಸಬೇಕು, ಅದಕ್ಕೆ ಪೂರಕ ಸಾಮಗ್ರಿಯೂ ಇಲ್ಲದೆ ಜನರು, ರೋಗಿಗಳು ನರಳಾಡುವಂತಾಗಿದೆ.
ಬಾಕ್ಸ್
ಕನಿಷ್ಠ ಮುಂದಾಲೋಚನೆ ಇಲ್ಲವೇ?
ಜಿಮ್ಸ್, ಜಯದೇವ ಬೃಹತ್ ಆಸ್ಪತ್ರೆಗಳಾಗಿದ್ದು ನೂರಾರು ಹೊರ, ಒಳ ರೋಗಿಗಳು ನಿತ್ಯ ಭೇಟಿ ನೀಡುತ್ತಾರೆ. ನಿತ್ಯ ಸಾವಿರಾರು ಲೀಟರ್ ನೀರು ಬೇಕಾಗುತ್ತದೆ. ನೀರು ಇಲ್ಲಿ ಅತ್ಯವಶ್ಯವಾಗಿದ್ದು, ರೋಗಿಗಳ ಜೀವದ ಪ್ರಶ್ನೆ ಇರುತ್ತದೆ. ಇಂತಹ ಮಹತ್ವದ ಸ್ಥಳದಲ್ಲಿಯೇ ಸಮರ್ಪಕ ನೀರಿನ ವ್ಯವಸ್ಥೆ ಮಾಡಲು ಆಗದಷ್ಟು ದುಸ್ಥಿತಿಗೆ ಬಂದಿರುವುದು ದುರಂತ. ಆಸ್ಪತ್ರೆ, ಪಾಲಿಕೆ ಅಧಿಕಾರಿಗಳಿಗೆ ಕನಿಷ್ಠ ಮುಂದಾಲೋಚನೆಯೂ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರು ಕೇಳುತ್ತಿದ್ದಾರೆ. ಈ ಬಗ್ಗೆ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆ ಹಿರಿಯ ಅಧಿಕಾರಿಗಳಿಗೆ ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.
ಬಾಕ್ಸ್
ನಾರುತ್ತಿವೆ ಶೌಚಗೃಹ
ಆಸ್ಪತ್ರೆಯಲ್ಲಿ ಕಳೆದ ೧೫ ದಿನದಿಂದ ನೀರಿನ ಸಮಸ್ಯೆ ನಿರಂತರವಾಗಿದ್ದು, ಸಮರ್ಪಕ ನೀರು ಪೂರೈಕೆ ಇಲ್ಲದೆ ಐಸಿಯು ಸೇರಿ ಎಲ್ಲ ವಾರ್ಡ್ಗಳ ಶೌಚಗೃಹಗಳಲ್ಲಿ ದುರ್ನಾತ ಬೀರುತ್ತಿದೆ. ಸ್ವಚ್ಛತೆ ಬಿಡಿ ಕನಿಷ್ಠ ಬಳಕೆ ಮಾಡಲೂ ನೀರು ಬಾರದೆ ಇರುವುದಕ್ಕೆ ಶೌಚಗೃಹಗಳು ದುರ್ನಾತ ಬೀರುತ್ತಿದ್ದು, ವಾರ್ಡ್ಗಳಲ್ಲಿ ಕುಳಿತುಕೊಳ್ಳಲೂ ಆಗದಂಥ ಸ್ಥಿತಿ ಸೃಷ್ಟಿಯಾಗಿದೆ. ವಾಪಸ್ ರೋಗಿಗಳಿಗೆ ಇನ್‌ಫೆಕ್ಷನ್ ಆಗುವ ಸಾಧ್ಯತೆ ಎನ್ನುತ್ತಾರೆ ರೋಗಿಗಳ ಜತೆ ಬಂದಿರುವ ಚಿರಂಜೀವಿ ಶಹಾಪುರ.