ಕಲಬುರಗಿ 16 ಜನರಿಗೆ ಸೋಂಕು

1006Klb16
Published on

ಕಲಬುರಗಿ: ಕರೊನಾದಿಂದ ಗುರುವಾರ 8 ತಿಂಗಳು ಹಸುಗೂಸು ಸೇರಿ 16 ಹೊಸ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಒಂದು ಉತ್ತರ ಪ್ರದೇಶದಿಂದ ಬಂದವರಾಗಿದ್ದರೆ ಉಳಿದವು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
ಉತ್ತರ ಪ್ರದೇಶಕ್ಕೆ ಹೋಗಿ ಬಂದಿರುವ 29 ವರ್ಷದ ಮಹಿಳೆಯನ್ನು ಕ್ವಾರಂಟೈನ್ ಮಾಡಿ ರಕ್ತ ಮತ್ತು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಈಗ ಆಕೆಗೆ ಸೋಂಕು ಇರುವುದು ಪತ್ತೆಯಾಗಿದೆ. 16 ಪ್ರಕರಣಗಳಲ್ಲಿ ಮೂವರು ಬಾಲಕಿಯರು, ಇಬ್ಬರು ಬಾಲಕರು, 9 ಜನ ಮಹಿಳೆಯರು ಸೇರಿದ್ದಾರೆ.
ಹೊಸ ಪ್ರಕರಣಗಳಲ್ಲಿ ಐದು ಪ್ರಕರಣಗಳು ಕಲಬುರಗಿ ತಾಲೂಕಿಗೆ ಸಂಬಂಧಿಸಿದ್ದರೆ, ಐದು ವರ್ಷದ ಮಗು ಮತ್ತು 13 ವರ್ಷದ ಬಾಲಕಿ ಕಾಳಗಿ ಪಟ್ಟಣಕ್ಕೆ ಸೇರಿದ್ದಾರೆ. ಏಳು ವರ್ಷದ ಬಾಲಕಿ ಮತ್ತು 35 ವರ್ಷದ ಪುರುಷ ಚಿಂಚೋಳಿ ತಾಲೂಕಿನ ಲಚ್ಚು ನಾಯಕ ತಾಂಡಾದವರಾಗಿದ್ದಾರೆ. ಯಡ್ರಾಮಿಯ 13 ವರ್ಷದ ಬಾಲಕಿ, ಅಫಜಲಪುರ ಪಟ್ಟಣದ 25 ವರ್ಷದ ಯುವಕನಿಗೆ ಸೋಂಕು ಇರುವುದು ದೃಢಪಟ್ಟಿದೆ. ಗುರುವಾರದ 16 ಸೋಂಕಿತರು ಸೇರಿ ಕಲಬುರಗಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 796 ಪ್ರಕರಣಗಳು ದಾಖಲಾದಂತಾಗಿವೆ. ಆ ಪೈಕಿ ಎಂಟು ಜನ ಸಾವನ್ನಪ್ಪಿದ್ದು, 285 ಜನ ಚೇತರಿಸಿಕೊಂಡಿದ್ದಾರೆ. 503 ಪ್ರಕರಣಗಳು ಸಕ್ರೀಯವಾಗಿವೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ಆರು ಜನರು ಚೇತರಿಕೆ ಐದು ಮಕ್ಕಳು ಸೇರಿ ಜಿಲ್ಲೆಯಲ್ಲಿ ಒಟ್ಟು ಆರು ಜನರು ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಗುರುವಾರ ಬಿಡುಗಡೆಯಾಗಿದ್ದಾರೆೆ. ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 7 ವರ್ಷದ ಬಾಲಕ, ಅಫಜಲಪುರ ತಾಲೂಕಿನ ರೇವೂರದ 25 ವರ್ಷದ ಯುವಕ, ಕಮಲಾಪುರ ತಾಲೂಕಿನ 9 ವರ್ಷದ ಬಾಲಕ, ವಿಕೆ ಸಲಗರದ 7 ವರ್ಷದ ಬಾಲಕ ಮತ್ತು 8 ವರ್ಷದ ಬಾಲಕಿ, 12 ವರ್ಷದ ಬಾಲಕಿ ಮಹಾಮಾರಿ ಸೋಂಕಿನಿಂದ ವೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

5 ವರ್ಷದ ಬಾಲಕನಿಗೆ ಕರೊನಾ ಸೋಂಕು
ಜೇವರ್ಗಿ : ತಾಲೂಕಿನ ನರಿಬೋಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಆಗಿದ್ದ ಐದು ವರ್ಷದ ಬಾಲಕನಿಗೆ ಕರೊನಾ ಸೋಂಕು ವಕ್ಕರಿಸಿದೆ. ಇತ್ತೀಚೆಗಷ್ಟೆ ಮಹಾರಾಷ್ಟ್ರದಿಂದ ಬಾಲಕನ ಕುಟುಂಬ ಸ್ವಗ್ರಾಮ ನರಿಬೋಳಕ್ಕೆ ಬಂದಿತ್ತು. ನಂತರ ಇವರನ್ನು ರಾಜವಾಳ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕೆಲ ದಿನಗಳ ಹಿಂದಷ್ಟೆ ಹೋಂ ಕ್ವಾರಂಟೈನ್ ಇರುವಂತೆ ಸೂಚನೆ ನೀಡಿ ಮನೆಗೆ ಕಳಿಸಲಾಗಿತ್ತು. ಇದೀಗ ಮನೆಯಲ್ಲಿದ್ದ 5 ಮಗುವಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಸೋಂಕಿತ ಮಗು ಹಾಗೂ ಸಂಪರ್ಕಕ್ಕೆ ಬಂದವರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net