ಕಲಘಟಗಿ ಪಟ್ಟಣ ಪಂಚಾಯಿತಿ ಗದ್ದುಗೆ ಏರಲು ಭಾರಿ ಕಸರತ್ತು

15-Kalaghatagi 1a
Published on

ಕಲಘಟಗಿ: ಸ್ಥಳೀಯ ಪಟ್ಟಣ ಪಂಚಾಯಿತಿಯ 17 ವಾರ್ಡ್​ಗಳಿಗೆ ಚುನಾವಣೆ ನಡೆದು 10 ತಿಂಗಳು ಗತಿಸಿದ ಮೇಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಮೀಸಲಾತಿ ಈಗ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆ ಏರಲು ಭಾರಿ ಕಸರತ್ತು ನಡೆದಿದೆ.

ಕಲಘಟಗಿ ಪಪಂ ವ್ಯಾಪ್ತಿಯ 17 ವಾರ್ಡಗಳಲ್ಲಿ ಬಿಜೆಪಿ 9, ಕಾಂಗ್ರೆಸ್ 3, ಜೆಡಿಎಸ್ 2, ಮೂವರು ಪಕ್ಷೇತರರು ಆ್ಕಯೆಾಗಿದ್ದಾರೆ. ಆದರೆ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿರಲಿಲ್ಲ. ಈಗ ಹೊರಬಿದ್ದ ಆದೇಶದಲ್ಲಿ ಅಧ್ಯಕ್ಷ ಸ್ಥಾನ-ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಪಪಂನಲ್ಲಿ ಅತಿ ಹೆಚ್ಚು ಸದಸ್ಯ ಬಲವುಳ್ಳ ಬಿಜೆಪಿ ಅಧಿಕಾರದ ಗದ್ದುಗೆ ಏರಲು ರಣತಂತ್ರ ಹೂಡá-ತ್ತಿದೆ. ಈಗಾಗಲೇ ಪಕ್ಷೇತರ ಸದಸ್ಯರು ಬಿಜೆಪಿ ಜತೆಗೆ ಕೈೋಡಿಸಿದ್ದರಿಂದ ಆನೆ ಬಲ ಬಂದಂತಾಗಿದೆ. ಒಂದು ವೇಳೆ 7ನೇ ವಾರ್ಡ್​ನ ಜೆಡಿಎಸ್ ಸದಸ್ಯೆ ಶಕುಂತಲಾ ಬೋಳಾರ ಕಾಂಗ್ರೆಸ್ ಮತ್ತು ಪಕ್ಷೇತರ ಸದಸ್ಯರೊಂದಿಗೆ ಕುದುರೆ ವ್ಯಾಪಾರ ಕೈಗೊಂಡರೆ ಅವರೇ ಅಧಿಕಾರದ ಗದ್ದುಗೆ ಏರುವಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾತá-ಗಳು ಕೇಳಿ ಬರá-ತ್ತಿವೆ. ಇದರಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರು ಯಾರಾಗá-ತ್ತಾರೆಂಬ ಕುತೂಹಲ ಸದಸ್ಯರಲ್ಲಿ ಹೆಚ್ಚಾಗಿದೆ.

ಆಕಾಂಕ್ಷಿಗಳು: ಕಲಘಟಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡ್​ನ ಬಿಜೆಪಿ ಸದಸ್ಯೆ ಅನಸೂಯಾ ಹೆಬ್ಬಳ್ಳಿಮಠ, 7ನೇ ವಾರ್ಡ್​ನ ಜೆಡಿಎಸ್ ಸದಸ್ಯೆ ಶಕುಂತಲಾ ಬೋಳಾರ, 14ನೇ ವಾರ್ಡ್​ನ ಪಕ್ಷೇತರ ಸದಸ್ಯೆ ಲಕ್ಷ್ಮೀ ಪಾಲ್ಕರ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ 9ನೇ ವಾರ್ಡ್​ನ ಬಿಜೆಪಿ ಸದಸ್ಯ ಗಂಗಾಧರ ಗೌಳಿ, 10ನೇ ವಾರ್ಡ್​ನ ಬಿಜೆಪಿ ಸದಸ್ಯ ಕೃಷ್ಣಾಜಿ ತಹಸೀಲ್ದಾರ, 5ನೇ ವಾರ್ಡ್​ನ ಪಕ್ಷೇತರ ಸದಸ್ಯ ಬಸವರಾಜ ಕಡ್ಲಾಸ್ಕರ, 8ನೇ ವಾರ್ಡ್​ನ ಬಿಜೆಪಿ ಸದಸ್ಯ ಕಲ್ಮೇಶ ಬೆಣ್ಣಿ ಆಕಾಂಕ್ಷಿಗಳಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net