ಕಲಘಟಗಿ ಗ್ರಾಮದೇವಿಯರ ಜಾತ್ರೆ ಸಂಪನ್ನ

12-Kalaghatagi 1
Published on

ಕಲಘಟಗಿ: ಪಟ್ಟಣದಲ್ಲಿ ಕಳೆದ 9 ದಿನಗಳಿಂದ ನಡೆದ ಶ್ರೀ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಗá-ರá-ವಾರ ಸಂಜೆ ಅತ್ಯಂತ ಸಡಗರ, ಸಂಭ್ರಮದಿಂದ ಸಂಪನ್ನಗೊಂಡಿತು.

ಗ್ರಾಮ ದೇವಿಯರಿಗೆ ಮಹಾಮಂಗಳಾರತಿ, ದೇವಸ್ಥಾನದ ಟ್ರಸ್ಟ್ ಕಮಿಟಿ, ಜಾತ್ರಾ ಉತ್ಸವ ಸಮಿತಿಯೊಂದಿಗೆ ಸೇವೆ ಸಲ್ಲಿಸಿದ ಯುವಕರು, ಹಿರಿಯರನ್ನು ಸತ್ಕರಿಸಲಾಯಿತು. ಭಕ್ತಾಧಿಗಳಿಗೆ ಸೇವೆ ನೀಡಿದ ಆರೋಗ್ಯ ಇಲಾಖೆ, ಕುಡಿಯುವ ನೀರಿನ ಹಾಗೂ ಸ್ವಚ್ಛತೆಯ ಸೇವೆಗೈದ ಪಪಂ, ಶಾಂತಿ ಸುವ್ಯವಸ್ತೆ ಕಾಪಾಡಿದ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯನ್ನು ಸತ್ಕರಿಸಲಾಯಿತು. ದಾಸೋಹ ವ್ಯವಸ್ಥೆ ಮಾಡಿದ ದಾನಿಗಳನ್ನು ಗೌರವಿಸಲಾಯಿತು.

ಮಧ್ಯಾಹ್ನ 4 ಗಂಟೆಗೆ ದೇವಿಯರ ಮೂರ್ತಿಗಳನ್ನು ಜಾತ್ರಾ ಮಂಟಪದಿಂದ ಹೊರತರುತ್ತಿದ್ದಂತೆ ಸೇರಿದ್ದ ಸಹಸ್ರಾರು ಭಕ್ತರ ಉಧೋ ಉಧೋ ತಾಯಿ ಎಂಬ ಘೊಷಣೆ ಮುಗಿಲು ಮುಟ್ಟಿತ್ತು. ಜಾತ್ರಾ ಉತ್ಸವ ಮಂಟಪದಲ್ಲಿ 9 ದಿನಗಳ ಕಾಲ ರಾಣಿಗೇರರು ರಂಗ ಹೊಯ್ದುಕೊಂಡು ದೀಪ ಕಾದಿದ್ದು, ದೇವಿಯರ ಮೆರವಣಿಗೆ ಹೋಗುತ್ತಿದ್ದಂತೆ ಅವರು ಮುಂದೆ ಮುಂದೆ ಸಾಗಿದರು.

ಮಂಟಪದ ಪ್ರವೇಶ ದ್ವಾರದ ಹೊರಗಡೆ ಶ್ರೀ ಗ್ರಾಮ ದೇವಿಯರ ಮೂರ್ತಿ ಬರುತ್ತಿದ್ದಂತೆ ಹಿಂದಿನ ವಿಧಿ-ವಿಧಾನಗಳಂತೆ ಮಾತಂಗಿ ಝೆೊಪಡಿಗೆ ಅಗ್ನಿ ಸ್ಪರ್ಶ ಮಾಡಿದ ನಂತರ ಗ್ರಾಮ ದೇವಿಯರು ಅಗ್ನಿಗೆ ಪ್ರದಕ್ಷಿಣಾಕಾರವಾಗಿ ತಿರುಗಿ ಅಲ್ಲಿಂದ ಸಕಲ ವಾದ್ಯ ಮೇಳ ಭಾಜಾ ಭಜಂತ್ರಿಗಳೊಂದಿಗೆ ಗ್ರಾಮ ದೇವಿಯರ ಮೂರ್ತಿಗಳ ಮೆರವಣಿಗೆ ಸಾಗಿ ಪಾದಗಟ್ಟೆ ತಲುಪಿ ಜಾತ್ರೆ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net