‘ಕಲಕ್ ಮಲಕ್ ಸತ್ಯಗಿರಿ ಸಂಪ ಆತಲೇ ಪರಾಕ್'

19 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ವಿದ್ಯಾಗಿರಿಯ ಶ್ರೀ ಮೈಲಾರಲಿಂಗ ದೇವಸ್ಥಾನದ ಜಾತ್ರೆ ಹಾಗೂ ಕಾರ್ಣಿಕೋತ್ಸವವು ಭಾನುವಾರ ಸಂಭ್ರಮದಿಂದ ನೆರವೇರಿತು.
ಜಾತ್ರಾ ಮಹೋತ್ಸವ ನಿಮಿತ್ತ ದೇವರಿಗೆ ಶನಿವಾರ ಮಹಾಭಿಷೇಕ, ಬಿಲ್ಲುಪೂಜೆ ಹಾಗೂ ರಾತ್ರಿ ಭಜನೆ ಜಾಗರಣೆ ನಡೆದವರು. ಭಾನುವಾರ ಬೆಳಗ್ಗೆ ವಿಶೇಷ ಪೂಜೆ, ಡೋಣಿ ತುಂಬಿಸುವುದು, ಅನ್ನ ಸಂತರ್ಪಣೆ, ಸಂಜೆ ಮಹಾಮಂಗಳಾರತಿ, ಪಲ್ಲಕ್ಕಿ ಉತ್ಸವ ನೆರವೇರಿತು.
ಬಳಿಕ ಕಾರ್ಣಿಕ ಪುರುಷ ಶ್ರೀ ಸಿರಿಮಲ್ಲ ತಿಪ್ಪಣ್ಣ ಶಿರೋಳ ಅವರು ಬಿಲ್ಲನ್ನೇರಿ ‘ಕಲಕ್ ಮಲಕ್ ಸತ್ಯಗಿರಿ ಸಂಪ ಆತಲೇ ಪರಾಕ್’ ಕಾರ್ಣಿಕ ನುಡಿದರು. ಸರ್ವೇ ಸಾಮಾನ್ಯವಾಗಿ ರಾಜಕೀಯದಲ್ಲಿ ಸ್ಥಿರ ಸರ್ಕಾರ ಇರಲಿದ್ದು, ಮಳೆ, ಬೆಳೆ ಜನರ ಬದುಕು ಸುಧಾರಣೆಯಾಗಲಿದೆ. ಇಡೀ ಜಗತ್ತನ್ನೇ ಭಾರತ ಆಳಲಿದೆ ಎಂದು ಕಾರ್ಣಿಕವನ್ನು ವಿಶ್ಲೇಷಣೆ ಮಾಡಲಾಗಿದೆ.
ಗೊರವಯ್ಯರು ನಡೆಸಿದ ಸರಪಳಿ ಸೇರಿ ವಿವಿಧ ಸೇವೆಗಳನ್ನು ಕಂಡು ಭಕ್ತರು ಕಣ್ತುಂಬಿಕೊಂಡರು. ದೇವಸ್ಥಾನದ ಪ್ರಮುಖರಾದ ತಿಪ್ಪಣ್ಭ ಶಿರೋಳ, ತಿರಕಪ್ಪ ಗೊರವಯ್ಯ, ಮಹಾಂತೇಶ ಪೂಜಾರ, ಮಂಜುನಾಥ ಪೂಜಾರ, ಶೇಖಪ್ಪ ಹೆಂಬಲಿ, ಜಿ.ಟಿ. ಶಿರೋಳ, ಎಂ.ಎಸ್. ಚಿಕ್ಕಯ್ಯನವರ, ಭೋಜಣ್ಣ ಪಾಟೀಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net