

ವಿಜಯಪುರ: ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿಗೆ ಸೇರ್ಪಡೆಗೊಂಡಿರುವ ಕಲಕೇರಿ ಗ್ರಾಮವನ್ನು ಶೀಘ್ರ ಹೋಬಳಿ ಎಂದು ಘೋಷಿಸಬೇಕು ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕಲಕೇರಿಯಿಂದ ತಾಳಿಕೋಟೆ ವರೆಗೆ ಸುಮಾರು 30 ಕಿಲೋಮೀಟರ್ ಪಾದಯಾತ್ರೆಗೆ ಕಲಕೇರಿಯ ಮುಖ್ಯ ಬಜಾರನಲ್ಲಿ ಇಂದು ಚಾಲನೆ ನೀಡಲಾಯಿತು. ಡಾ.ನಂದಕುಮಾರ ಭೈರಿ ಹಾಗೂ ಮುಖಂಡರುಗಳು ಪಂಚ ಧ್ವಜಗಳ ನಿಶಾನೆಯನ್ನು ತೋರಿಸುವ ಮೂಲಕವಾಗಿ ಬೃಹತ್ ಪ್ರತಿಭಟನಾ ರ್ಯಾಲಿ ಹಾಗೂ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಪಾದಯಾತ್ರೆಯಲ್ಲಿ ಕಲಕೇರಿ ಹಾಗೂ ವಿವಿಧ ಗ್ರಾಮಗಳ ಸುಮಾರು 1೦೦೦ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.