ಕಲಕೇರಿ ರಸ್ತೆಯಲ್ಲಿ ಕಂಡಲ್ಲೆಲ್ಲಾ ಗುಂಡಿ

4MDG1
Published on

ಮುಂಡರಗಿ: ತಾಲೂಕಿನ ಬೀಡನಾಳ ಗ್ರಾಮದಿಂದ ಕಲಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 5 ಕಿ.ಮೀ. ರಸ್ತೆಯಲ್ಲಿ ಸುಮಾರು 2 ಕಿ.ಮೀ. ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ಭಾಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಟಿಪ್ಪರ್, ಲಾರಿಯಂತಹ ಬೃಹತ್ ವಾಹನಗಳ ಸಂಚಾರ ಹೊರತುಪಡಿಸಿ ಇನ್ನುಳಿದ ವಾಹನಗಳು ಸಂಚರಿಸದಂಥ ಸ್ಥಿತಿ ನಿರ್ವಣವಾಗಿದೆ.

ಪ್ರತಿದಿನ ಈ ಮಾರ್ಗದಿಂದ ಬೀಡನಾಳ, ಗಂಗಾಪುರ, ಶಿಂಗಟಾಲೂರ, ತಿಪ್ಪಾಪುರ, ಕಲಕೇರಿ ಮೊದಲಾದ ಗ್ರಾಮಗಳಿಗೆ ಜನರು ಸಂಚರಿಸುತ್ತಾರೆ. ಸಂಪೂರ್ಣ ಹದಗೆಟ್ಟ ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ವಾಹನ ಸವಾರರು ಹರಸಾಹಸ ಪಡುವಂತಾಗಿದೆ. ರಸ್ತೆಯೆಲ್ಲೆಡೆ ತಗ್ಗು -ಗುಂಡಿಗಳು ಕಾಣುತ್ತವೆ. ಬೈಕ್ ಸವಾರರು ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡ ಘಟನೆಗಳು ಸಹ ನಡೆದಿವೆ. ಕಾರುಗಳ ಸಂಚಾರವಂತೂ ಸ್ಥಗಿತಗೊಂಡಿದೆ.

ಸಂರ್ಪಣ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಗೊಳಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಬೀಡನಾಳ ಗ್ರಾಮದ ದೇವಪ್ಪ ಹುಳಕಣ್ಣರ, ಬಸಪ್ಪ ಕರಕಣ್ಣವರ, ಸಿದ್ಧೇಶ ತಿಪ್ಪಾಪುರ, ಕಲಕೇರಿ ಗ್ರಾಮದ ಗುರುಶಿದ್ದಯ್ಯ ಗುರುವಿನ, ನಿಂಗಪ್ಪ ಬರದೂರ ಮೊದಲಾದವರು ಒತ್ತಾಯಿಸಿದ್ದಾರೆ.

ವಾರ್ಷಿಕ ನಿರ್ವಹಣೆ ಕಾಮಗಾರಿಗಳ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಗೊಳಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಮುಂಬರುವ ದಿನಗಳಲ್ಲಿ ಗುಣಮಟ್ಟದ ರಸ್ತೆ ನಿರ್ವಿುಸಲು ಕ್ರಮ ಕೈಗೊಳ್ಳಲಾಗುವುದು. | ರಾಮಮೂರ್ತಿ ಎ., ಪಿಡಬ್ಲ್ಯುಡಿ ಎಇಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net