

ಕಲಬುರಗಿ: ಸೇಡಂ ತಾಲೂಕಿನ ಮಳಖೇಡದಲ್ಲಿರುವ ರಾಜಶ್ರೀ ಅಲ್ಟಾಟೆಕ್ ಸಿಮೆಂಟ್ ಕರ‍್ಖಾನೆಯ ಪ್ಯಾಕಿಂಗ್ ಮತ್ತು ಲೋಡಿಂಗ್ ಆಧಾರದಲ್ಲಿ ಕೆಲಸ ಮಾಡುವ ಕರ‍್ಮಿಕರಿಗೆ ಮೂಲಸೌಲಭ್ಯ ನೀಡಬೇಕು, ಕರ‍್ಮಿಕರಿಗೆ ಡ್ಯೂಟಿ ಶ್ಟ್ಿ ಸೇರಿ ಹಲವು ಬೇಡಿಕೆ ಈಡೇರಿಸಲು ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿಯಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ, ಧರಣಿ ನಡೆಸಿದರು. ರಾಜಶ್ರೀ ಅಲ್ಟಾಟೆಕ್ ಸಿಮೆಂಟ್ ಕರ‍್ಖಾನೆ ಪ್ಯಾಕಿಂಗ್ ಮತ್ತು ಲೋಡಿಂಗ್ ಕರ‍್ಮಿಕರಿಗೆ ನಿರಂತರ ದರ‍್ಜನ್ಯ ನಡೆಯುತ್ತಿದೆ. ಈ ಬಗ್ಗೆ ಕಂಪನಿ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ, ಕರ‍್ಮಿಕ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ‍್ಮಿಕರಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಬೇಕು, ಗುತ್ತಿಗೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ಕಂಪನಿಯಲ್ಲಿ ಸೂರ‍್ವೈಸರ್ ರ‍್ಕ್ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ರ‍್ನಾಟಕ ರಣಾ ವೇದಿಕೆ ಜಿಲ್ಲಾಧ್ಯ ಸಂದೀಪ ಭರಣಿ, ಅಂಬೇಡ್ಕರ್ ಸೇವಾ ಸಮಿತಿ ಯುವ ಘಟಕ ಅಧ್ಯಕ್ಷ ಎನ್.ಕೆ. ರ‍್ಜುನ, ಎಎಸ್ಎಸ್ಕೆ ಜಿಲ್ಲಾಧ್ಯ ಬುದ್ದೇಶ ಸಿಂಗೆ, ಉಪಾಧ್ಯ ಭಾಗೇಶ, ಕರ‍್ಮಿಕರಾದ ಮಲ್ಲಿಕರ‍್ಜುನ ಕಟ್ಟಿ, ಸಂಜಯ, ಅಭಿಮನ್ಯು, ಧಮೇರ್ಂಧರ್, ದುಂಡಪ್ಪ ಪೂಜಾರಿ, ರಾಜು ರಾಠೋಡ ಇತರರಿದ್ದರು.