

ಸಾಲಿಗ್ರಾಮ: ತಾಲೂಕಿನ ಕರ್ಪೂರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಯಿತು.
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪ್ರೇಮಾಸ್ವಾಮಿ ಮತ್ತು ಗೌರಮ್ಮ ರಾಜಯ್ಯ ನಾಮಪತ್ರ ಸಲ್ಲಿಸಿದ್ದರು. ಇಬ್ಬರೂ ತಲಾ 10 ಮತಗಳನ್ನು ಪಡೆದು, 1 ಮತವು ಅಸಿಂಧುವಾಯಿತು. ನಂತರ ಲಾಟರಿಯ ಮೂಲಕ ಅಧ್ಯಕ್ಷರ ಆಯ್ಕೆ ಮಾಡಲಾಗಿ, ಪ್ರೇಮಾ ಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ರಘು ಮತ್ತು ಸಿ.ಎಸ್.ಅನುಷಾ ವಿಶ್ವನಾಥ್ ನಾಮಪತ್ರ ಸಲ್ಲಿಸಿದ್ದರು. ಸಿ.ಎಸ್.ಅನುಷಾ ವಿಶ್ವನಾಥ್ 11 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ರಘು 9 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾ ಅಧಿಕಾರಿಯಾಗಿ ಜಿಪಂ ಎಇಇ ವಿನುತ್, ಸಹಾಯಕ ಚುನಾವಣಾ ಅಧಿಕಾರಿಯಾಗಿ ಜಿ.ಪಂ.ಇಂಜಿನಿಯರ್ ದಡದಹಳ್ಳಿಸ್ವಾಮಿ ಕಾರ್ಯನಿರ್ವಹಿಸಿದರು.
ಸದಸ್ಯರಾದ ಲೋಕೇಶ್, ಸಂಗೀತಾ, ಹರ್ಷವರ್ಧನ, ರುಕ್ಮಿಣಿ, ಜಬೀರ್ ಖಾನ್, ಡಿಎಸ್ ರವಿ, ಮಂಜುನಾಥ, ಎಂ.ಆರ್.ಸಂತೋಷ್, ಪ್ರಮೀಳಾ, ಸುಜಾತಾ, ಕಾಳಮ್ಮ, ರಾಘವೇಂದ್ರ, ರಂಗಸ್ವಾಮಿ, ವಿನೋದ, ಮಂಜುನಾಥ, ಜಿಎನ್ ಸುಜಾತಾ, ಶಿವಮ್ಮ ಇದ್ದರು.