

ಸಿರಗುಪ್ಪ: ದೇಶದಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ರಾಜ್ಯ ಸರ್ಕಾರ ಮಾತ್ರ ಕಲ್ಪಿಸಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಾರುತಿ ವರಪ್ರಸಾದ ರೆಡ್ಡಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಫಲಾನುಭವಿಗಳ ಸಂಖ್ಯೆ 500 ಕೋಟಿ ಗಡಿ ದಾಟಿರುವುದು ಇತಿಹಾಸ ಮತ್ತು ಸಂಭ್ರಮದ ಸಂಗತಿಯಾಗಿದೆ. ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಎಸ್.ಎಂ.ನಾಗರಾಜಸ್ವಾಮಿ, ಬಿ.ಲಕ್ಷ್ಮೀ, ಪಾಲಾಕ್ಷಿ ಗೌಡ, ವೆಂಕಟರೆಡ್ಡಿ, ಚನ್ನಬಸವ, ಕೆ.ವೀರೇಶ್, ಜಿ.ಬಸವನಗೌಡ. ಟಿ.ಎಂ.ಅಪ್ಪಾಜಿ ನಾಯಕ್, ಬಿ.ಕೆ.ಹುಸೇನ್, ಡಿ.ದಾನೇಶ್ವರಿ. ಕೆ.ಎಚ್ ಗಿರೀಶ್ ಇದ್ದರು.