ಕರ್ನಾಟಕ ಲಾಲು ಆಡಳಿತದ ಬಿಹಾರವಾಗಿದೆ

ctd ooo10
Published on

ಚಿತ್ರದುರ್ಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂ ದ್ರ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚನ್ನಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣ ಗಮನಿಸಿದರೆ,ಕರ್ನಾಟಕದಲ್ಲಿ ಲಾಲುಪ್ರಸಾದಯಾದವ್ ಆಡಳಿತವಿದ್ದ ಬಿಹಾರದಂತಾಗಿದೆ.
ಲಾಕಪ್‌ಡೆತ್ ಕುರಿತಂತೆ ಸ್ಪಷ್ಟ ಮಾಹಿತಿ ಹೊರಬರಬೇಕಿದೆ. ಚುನಾಯಿತ ಸರ್ಕಾರ ಇದೆ ಎಂಬುದನ್ನೇ ಜನ ಮರೆಯುವಂತಾಗಿದೆ. ಪೊಲೀಸ್ ವ್ಯವಸ್ಥೆ ಬಗ್ಗೆ ಭಯ ಇಲ್ಲವಾಗುತ್ತಿದೆ. ಹಿಂದಿನ ಡಿಜೆಹಳ್ಳಿ,ಕೆಜೆಹಳ್ಳಿ ಪ್ರಕರಣಗಳನ್ನು ನೆನಪಿಸಿದ ಅವರು,ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ತುಷ್ಠೀಕರಣ ನೀತಿಯಿಂದಾಗಿ ಕಾನೂನು ಸುವ್ಯವಸ್ಥೆ ವ್ಯವಸ್ಥೆ ಕುಸಿದಿದೆ.
ಸಾವಿರಾರು ಜನರು ಠಾಣೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಪೊಲೀಸರ ರಕ್ಷಣೆಗೆ ಪೊಲೀಸರೇ ಬರುವಂಥ ದುಸ್ಥಿತಿ ಎದುರಾಗಿದ್ದು,ಅಲ್ಪ ಸಂ ಖ್ಯಾತರ ತುಷ್ಟೀಕರಣ ನೀತಿ ಕುರಿತು ಸಿಎಂ ಸಿದ್ದರಾಮಯ್ಯ ಚಿಂತನೆ ಮಾಡಲಿ. ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆಂದರೆ ಸರ್ಕಾರ ಇದೆಯೇ?ಗೃಹ ಸಚಿವ ಡಾ.ಜಿ.ಪರಮೇಶ್ವರ್ ಏನು ಮಾಡುತ್ತಿದ್ದಾರೆ?
ಠಾಣೆಗೆ ನುಗ್ಗಿ ಗಲಾಟೆ ಮಾಡಿದವರು ಎಲ್ಲರೂ ಅಮಾಯಕರೇ? ರಾಜ್ಯಸರ್ಕಾರ ಯಾವಾಗ ಎಚ್ಚೆತ್ತುಕೊಳ್ಳುತ್ತದೆಯೋ ಎಂದು ಪ್ರಶ್ನಿಸಿದ ಅ ವರು,ರಾಜ್ಯವನ್ನು ಭಗವಂತನೇ ಕಾಪಾಡಬೇಕೆಂದು ಕಿಡಿಕಾರಿದರು.
ಪ್ರಜ್ವಲ್‌ಪೆನ್‌ಡ್ರೈವ್ ಪ್ರಕರಣ ಗೊತ್ತಿದ್ದೂ ಬಿಜೆಪಿ, ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದೆ ಎಂಬ ಸಚಿವ ಪ್ರಿಯಾಂಕ್‌ಖರ್ಗೆ ಆರೋಪಕ್ಕೆ ಪ್ರತಿ ಕ್ರಿ ಯಿಸಿದ ಅವರು,ಪ್ರಿಯಾಂಕ್‌ಖರ್ಗೆ ಅವರು ಕಲಬುರಗಿಯಲ್ಲಿ ಕಾನೂನು ಸುವ್ಯಸ್ಥೆಯ ಬಗ್ಗೆ ಗಮನಹರಿಸಲಿ.
ಪ್ರಜ್ವಲ್ಪೆನ್‌ಡ್ರೈವ್ ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಸಾಗಿದೆ ಎಂದು ಜನ ಗಮನಿಸುತ್ತಿದ್ದು,ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ದ್ದೇವೆ.ಪ್ರಕರಣ ಬಯಲಾದ ಆರೇಳು ದಿನಗಳ ಕಾಲ ರಾಜ್ಯಸರ್ಕಾರ ಏನು ಮಾಡುತ್ತಿತ್ತು?ಆರಂಭದಲ್ಲೇ ಯಾಕೆ ಎಚ್ಚೆತ್ತುಕೊಳ್ಳಲಿಲ್ಲ ಉತ್ತರ ಕೊ ಡುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿದರು. ಕೇಂದ್ರ ಸರ್ಕಾರ ಜವಾಬ್ದಾರಿ ಮರೆತಿಲ್ಲ,ತನ್ನ ಕೆಲಸ ಮಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net