ಕರ್ನಾಟಕ ರಾಜ್ಯದ ಅತ್ಯುತ್ತಮ ಪ್ರಾಜೆಕ್ಟ್ಟ್ ಪ್ರಶಸ್ತಿ

Press Photo - Best Project Award
ಬೆಳಗಾವಿ ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದ ಅಂತಿಮ ವರ್ಷದ ಎಂ.ಟೆಕ್ ವಿದ್ಯಾರ್ಥಿ ಶ್ರೀಧರ ಉಳ್ಳಾಗಡ್ಡಿಯೊಂದಿಗೆ, ಸಂಸ್ಥೆಯ ನಿರ್ದೇಶಕಿ ಸ್ಪೂರ್ತಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ, ಸಿವ್ಹಿಲ್ ಇಂಜನೀಯರಿಂಗ್ ವಿಭಾಗದ ಮುಖ್ಯಸ್ಥ ಕಿರಣ ಕೋರಡ್ಡಿ, ವಿದ್ಯಾರ್ಥಿಯ ಮಾರ್ಗದರ್ಶಕ ಡಾ.ಬಿ.ಟಿ. ಸುರೇಶ ಬಾಬು ಇದ್ದಾರೆ.
Published on

ಅಂಗಡಿ ಎಐಟಿಎಂ ಕಾಲೇಜು ವಿದ್ಯಾರ್ಥಿ ಸಾಧನೆ

ಬೆಳಗಾವಿ: ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನೆ ಮಹಾವಿದ್ಯಾಲಯದ ಅಂತಿಮ ವರ್ಷದ ಎಂ.ಟೆಕ್ ವಿದ್ಯಾರ್ಥಿ ಶ್ರೀಧರ ಉಳ್ಳಾಗಡ್ಡಿ ಮಂಡಿಸಿದ ಪ್ರಾಜೆಕ್ಟ್ ಸ್ಟ್ಟ್‌ಡಿ ಆನ್ ರಿಕವರಿ ಆಫ್ ವ್ಯಾಕ್ಸ ಫ್ರಾಮ್ ಶುಗರಕೇನ್ ಇಂಡಸ್ಟ್ರೀಸ್ ಪ್ರೆಸ್‌ಮಡ್ ಫಾರ್‌ದ ಇಂಪ್ರೂವ್‌ಮೆಂಟ್ ಆಫ್ ಅಗ್ರಿಕಲ್ಚರಲ್ ಸಾಯಿಲ್ ಫರ್ಟಿಲಿಟಿ ಪ್ರಾಜೆಕ್ಟ್‌ಗೆ ಪ್ರಶಸ್ತಿ ಬಂದಿದೆ.
ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸಾಯಿನ್ಸ ಆ್ಯಂಡ್ ಟೆಕ್ನಾಲಜಿ ಅವರು ಸಂಯೋಜಿಸಿದ 46ನೇ ವಿದ್ಯಾರ್ಥಿಗಳ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿ-2022-23 ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಇತ್ತೀಚೆಗೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಜರುಗಿತು.
ವಿದ್ಯಾರ್ಥಿಯ ಈ ಸಾಧನೆಗೆ ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷೆ ಹಾಗೂ ಸಂಸದೆ ಮಂಗಲ ಸುರೇಶ ಅಂಗಡಿ, ನಿರ್ದೇಶಕಿ ಸ್ಫೂರ್ತಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ, ಸಿವ್ಹಿಲ್ ಇಂಜನೀಯರಿಂಗ್ ವಿಭಾಗದ ಮುಖ್ಯಸ್ಥ ಕಿರಣ ಕೋರಡ್ಡಿ, ವಿದ್ಯಾರ್ಥಿಯ ಮಾರ್ಗದರ್ಶಕ ಡಾ. ಬಿ.ಟಿ. ಸುರೇಶ ಬಾಬು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net