ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಪದಗ್ರಹಣ

5-KGL-7,,,,,,,
Published on

ಕೊಳ್ಳೇಗಾಲ: ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರಿ ಅವರು ಸಂಘದ ನೂತನ ಪದಾಧಿಕಾರಿಗಳಿಗೆ ನೇಮಕ ಮಾಡಿ ಆದೇಶ ಪತ್ರ ವಿತರಿಸಿದರು.

ನೂತನ ಪದಾಧಿಕಾರಿಗಳು : ಪ್ರಧಾನ ಕಾರ್ಯದರ್ಶಿಯಾಗಿ ಸಿ.ಚಂದನ್ ಕುಮಾರ್, ಉಪಾಧ್ಯಕ್ಷರಾಗಿ ಯೂನಸ್ ಪಾಷ, ಮಹಮ್ಮದ್ ಅಪ್ಜಲ್(ಅಜ್ಜು), ರವಿಕುಮಾರ್, ಪ್ರಜ್ವಲ್, ಸಂಘಟನಾ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಷ್ಫಾಕ್ ಉಲ್ಲಾ, ಸಲಹಾ ಗೌರವಧ್ಯಕ್ಷರಾಗಿ ರೇಚಣ್ಣ, ಪತ್ರಿಕೆ ಸಲಹೆಗಾರ ಸಿದ್ದರಾಜು ದೊಡ್ಡಿಂದುವಾಡಿ, ಖಜಾಂಚಿಯಾಗಿ ರಾಜೀಕ್ ಉಲ್ಲಾ (ಗುಡ್ಡ) ಅವರು ನೇಮಕಗೊಂಡರು. ಬಳಿಕ ಸಂಘಟನೆಗೆ ನೂತನ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ಇದೇ ವೇಳೆ ಹೊಸ ಹಂಪಾಪುರ ಗ್ರಾಮ ಘಟಕ ಸದಸ್ಯರಾದ ಮಹದೇವ, ಬಾಲರಾಜು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net