

ಚಿಕ್ಕಮಗಳೂರು: ನಗರದ ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಬಿ.ಸಿ.ಗೀತಾ, ಉಪಾಧ್ಯಕ್ಷರಾಗಿ ಎಚ್.ಆರ್.ಸುಧಾ ಅವರು ಅವರು ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರಿ ಸಂಘಗಳ ಉಪನಿಬಂಧಕಿ ಡಾ.ಡಿ.ಎಸ್.ತೇಜಸ್ವಿನಿ ತಿಳಿಸಿದ್ದಾರೆ.
ಬ್ಯಾಂಕ್‌ನ ಆಡಳಿತ ಮಂಡಳಿಗೆ ಚುನಾವಣೆಯು ಫೆ. ೨ರಂದು ನಡೆದಿದ್ದು, ಬ್ಯಾಂಕಿನ ಆಡಳಿತ ಮಂಡಳಿಗೆ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬ್ಯಾಂಕಿನ ನೂತನ ಅಧ್ಯಕ್ಷರು, ಉಪಾಧ್ಯಕ್ಷರ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಬ್ಯಾಂಕ್ ನಿರ್ದೇಶಕರಾದ ಸುಜಾತ ಕೃಷ್ಣಮೂರ್ತಿ, ಕಮಲಾ ಬಸವರಾಜ್, ಜಯಶ್ರೀ ನಂಜರಾಜ್, ಟಿ.ಪಿ.ಜಯಲಕ್ಷ್ಮೀ, ಸೌಭಾಗ್ಯ ಗೋಪಾಲನ್, ಬನಶಂಕರಿ ಜೋಷಿ, ತಾರ ಮೋಹನ್, ಆಶಾ, ಕವಿತಾ, ಮೀನಾ, ಸ್ಮಿತಾ, ಸೌಜನ್ಯ ಉಪಸ್ಥಿತರಿದ್ದರು.