

ಮೈಸೂರು: ಚಲನಚಿತ್ರರಂಗದಲ್ಲಿ ದುಡಿಯುತ್ತಿರುವವರ ಹಿತ ಕಾಯುವ ಉದ್ದೇಶದಿಂದ ‘ಕರ್ನಾಟಕ ಫಿಲಂ ಅಸೋಸಿಯೇಷನ್’ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಸ್. ರವೀಂದ್ರ ಹೇಳಿದರು.
ಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲ ವಿಭಾಗದವರಿಗೆ ಸಂಸ್ಥೆಯಿಂದ ಸದಸ್ಯತ್ವ ಹಾಗೂ ಗುರುತಿನ ಚೀಟಿ ನೀಡಲಾಗುವುದು. ತುರ್ತು ಸಂದರ್ಭಗಳಲ್ಲಿ ಸದಸ್ಯರಿಗೆ ನೆರವು ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಮಾಹಿತಿಗೆ ಮೊ: 99008 44344 ಸಂಪರ್ಕಿಸಬಹುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎನ್. ಪ್ರಹ್ಲಾದ್, ರಾಧಮ್ಮ, ನಂಜುಂಡಸ್ವಾಮಿ, ಧನ್ಯ ಕುಮಾರ್ ಇದ್ದರು.