

ಬೆಟ್ಟದಪುರ: ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲು ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ. ಹಾರನಹಳ್ಳಿ ಗ್ರಾಮವು ಹೋಬಳಿ ಕೇಂದ್ರವಾಗಿರುವುದರಿಂದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು. ಹದಗೆಟ್ಟದ್ದ ಪೂನಾಡಹಳ್ಳಿ, ಚಿಕ್ಕನೇರಳೆ, ಹಾರನಹಳ್ಳಿ ಮುಖ್ಯರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಹಾರನಹಳ್ಳಿ ಗ್ರಾಪಂ ಸದಸ್ಯರಾದ ಬಿ.ಎಸ್. ಕೃಷ್ಣೇಗೌಡ, ಅನಿಲ್‌ಕುಮಾರ್, ಚಪ್ಪರದಹಳ್ಳಿ ಗ್ರಾಪಂ ಸದಸ್ಯರಾದ ಸಿ.ಕೆ.ವೆಂಕಟೇಶ್, ಸಿ.ಪಿ.ಸುರೇಶ್, ತಾಪಂ ಮಾಜಿ ಸದಸ್ಯ ಎ.ಆರ್.ಶಂಕರೇಗೌಡ, ಮುಖಂಡರಾದ ಸುರಗಳ್ಳಿ ವಿದ್ಯಾಶಂಕರ್, ರವಿಗೌಡ, ಹಾರನಹಳ್ಳಿ ಪಾರ್ಥೇಗೌಡ, ಅಣ್ಣಯ್ಯಚಾರಿ, ಎಚ್.ಟಿ.ಗೋವಿಂದೇಗೌಡ, ಎಚ್.ಟಿ.ರಾಮಣ್ಣ, ನಾಗೇಂದ್ರ, ಚನ್ನೇಗೌಡ, ಸಿ.ಆರ್.ನಾಗರಾಜು, ಮಂಜು, ಸಿ.ಎಲ್.ಗಣೇಶ್, ಉಪಪ್ರಾಂಶುಪಾಲ ಜಿ.ಸಿ.ಶಂಕರ್, ಇಂಜಿನಿಯರ್ ಕುಮಾರ್, ಶಿಕ್ಷಕರಾದ ಆರ್.ಶಿವಣ್ಣ, ಆರ್.ಸುರೇಶ್ ನಾಯ್ಕ, ಸಿ.ವಿ.ಪಾರ್ವತಮ್ಮ, ದಯಾನಂದ ಅವಟಿ, ಎಂ.ಶ್ರುತಿ, ಲಕ್ಷ್ಮಣ್ ತಳವಾರ್, ಕರುಣೇಶ್, ಮಹೇಶ್ ಇತರರು ಇದ್ದರು.