ಬಳ್ಳಾರಿ : ಇಲ್ಲಿನ ರಾಯಲ್ ವೃತ್ತದ ಪಾಲಿಕೆ ಕಚೇರಿ ಆವರಣದಲ್ಲಿ ಕರ್ನಾಟಕ ಒನ್’ನಲ್ಲಿ ಕಳೆದ ತಿಂಗಳು ನಡೆದಿದ್ದ 75 ಲಕ್ಷ ರೂ. ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಶ್ರೀಧರಗಡ್ಡೆ ಗ್ರಾಮದ, ವೃತ್ತಿಯಲ್ಲಿ ಪುರೋಹಿತನಾದ ಎಸ್.ಟಿ.ಎಂ.ಕೆ.ಚಂದ್ರಶೇಖರಯ್ಯ (33) ಬಂಧಿತ. ಆತನಿಂದ 72 ಲಕ್ಷ ರೂ. ಕೃತ್ಯಕ್ಕೆ ಬಳಸಿದ ಹೊಂಡಾ ಮೋಟರ್ ಸೈಕಲ್, ಕಳ್ಳತನದ ಹಣದಲ್ಲಿ ಖರೀದಿಸಿದ್ದ ಎರಡು ಮೊಬೈಲ್‌ಗಳನ್ನು ಜಫ್ತಿ ಮಾಡಲಾಗಿದೆ. ದರೋಡೆ ಮಾಡಲಾದ ಒಟ್ಟು 75 ರೂ. ಲಕ್ಷದಲ್ಲಿ 3 ಲಕ್ಷ ರೂ. ವನ್ನು ಚಂದ್ರಶೇಖರಯ್ಯ ಖರ್ಚು ಮಾಡಿದ್ದಾರೆ. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಮಹಾಲಿಂಗ ತಲೆ ಮರೆಸಿಕೊಂಡಿದ್ದಾರೆ. ಈ ಕುರಿತು ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.