ಕರ್ತವ್ಯಲೋಪ ಇಬ್ಬರು ವೈದ್ಯರ ಅಮಾನತು

Suspended
Published on

ಕರ್ತವ್ಯಲೋಪ ಇಬ್ಬರು ವೈದ್ಯರ ಅಮಾನತು

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ಕರ್ತವ್ಯಲೋಪ ಮತ್ತು ಗರ್ಭಿಣಿ ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರಿದ ಆರೋಪದಡಿ ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಸೇವೆಯಿಂದ ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಯಲಕ್ಷ್ಮಿ ಮುಸಾಳೆ ಮತ್ತು ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ  ಡಾ. ಕಮಲಾ ಕುಳಗೇರಿ ಅಮಾನತಾದ ವೈದ್ಯರು. ಡಾ.ಜಯಲಕ್ಷ್ಮಿ ಮುಸಾಳೆ ಅವರು ಹೆರಿಗೆ ನಂತರ ಜನನಾಂಗದಲ್ಲಿ ಹತ್ತಿ ತುಂಡು ಬಿಟ್ಟು ಹೊಲಿಗೆ ಹಾಕಿದ್ದು, ಸರಿಯಾಗಿ ಖುದ್ದಾಗಿ ತಪಾಸಣೆ ನಡೆಸದೆ ನಿರ್ಲಕ್ಷ್ಯ ತೋರಿರುವ, ಜತೆಗೆ ನಿಯಮ ಬಾಹಿರವಾಗಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ಕಳುಸಿರುವ ಆರೋಪ ಕೇಳಿ ಬಂದಿತ್ತು. ಹಾಗೂ ಡಾ.ಕಮಲಾ ಕುಳಗೇರಿ ಅವರ ಕರ್ತವ್ಯಲೋಪದಿಂದ ಗರ್ಭಿಣಿ ಹೊಟ್ಟೆಯಲ್ಲಿನ ಮಗು ಸಾವು ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿತ್ತು .

ಈ ಬಗ್ಗೆ  ಬೆಳಗಾವಿ ವೈದೈಕೀಯ ತಂಡ ತನಿಖೆ ನಡೆಸಿ ವರದಿ ನೀಡಿದ ಬೆನ್ನಲೆ ಇಬ್ಬರನ್ನು ಅಮಾನತು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net