

ಹುಮನಾಬಾದ್: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ ವಿಜ್ಞಾನ ಸಹಾಯಕರಾಗಿ ೩೪ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಫಕೀರ್ ಅಹ್ಮದ್ ಅವರನ್ನು ಸೋಮವಾರ ಸನ್ಮಾನಿಸಿ ಬೀಳ್ಕೊಡಲಾಯಿತು. ಪ್ರೌಢ ಶಾಲೆ ಶಿP್ಷÀಕರ ಸಂಘದ ಜಿಲ್ಲಾಧ್ಯಕ್ಷ ಶೇಖ್ ಮೆಹಬೂಬ್ ಪಟೇಲï ಮಾತನಾಡಿ, ಸಮಯ ಪಾಲನೆ, ಕರ್ತವ್ಯ ನಿಷ್ಠೆ, ಉತ್ತಮ ಸೇವೆ ನಿರ್ವಹಿಸುವಲ್ಲಿ ಫಕೀರ್ ಅಹ್ಮದ್ ಪಾತ್ರ ಪ್ರಮುಖವಾಗಿದೆ ಎಂದು ಕೊಂಡಾಡಿದರು. ಮುಖ್ಯಗುರು ಪರಮೇಶ್ವರ, ಜಿಲ್ಲಾ ಉಪಾಧ್ಯಕ್ಷ ವೀರಂತರೆಡ್ಡಿ ಜಂಪಾ ಮಾತನಾಡಿ, ಫಕೀರ್ ಅಹ್ಮದ್ ಶ್ರದ್ಧೆಯಿಂದ ಸೇವೆ ಸಲ್ಲಿಸಿz್ದÁರೆ ಎಂದರು. ಪ್ರಮುಖರಾದ ರವೀಂದ್ರ ಮಲಶೆಟ್ಟಿ, ಅಬ್ದುಲ್ ಸಾಬ್ ತಾಂಬೆ, ಬಸಿರೋದ್ದೀನ್, ಅಸ್ಲಂ ಆರೀಫ್ ಹುಸೇನ್, ಜಯಪ್ರಕಾಶ, ಕಾಶೀನಾಥ ಸ್ವಾಮಿ, ಕುಮಾರ ಗೋವಿಂದ, ಪ್ರವೀಣ, ಮೀರಾಗಂಜಕರ್ ತ್ರಿವೇಣಿ, ಮಹೇಶ್ವರಿ, ಗೌಸಿಯಾ ಬೇಗಂ, ಸೋಫಿಯಾ ಬೇಗಂ, ಮುನೀರ್ ಅಹ್ಮದ್, ಅಖಿಲ್ ಅಹ್ಮದ್, ಅಸ್ಮಾ ಬೇಗಂ, ಬದ್ರುದ್ದೀನ್ ವಲಿ, ಕಾಶೀನಾಥ ವಾರದ ಇತರರಿದ್ದರು.