

ಮೈಸೂರು: ಮೈಸೂರಿನ ಹೂಟಗಳ್ಳಿ ಬಡಾವಣೆಯಲ್ಲಿ ವಿದ್ಯುತ್ ಪ್ರವಹಿಸಿ ಕರ್ತವ್ಯನಿರತ ಲೈನ್‌ಮನ್ ಭಾನುವಾರ ಮೃತಪಟ್ಟಿದ್ದಾರೆ.
ಸೆಸ್ಕ್‌ನ ಸಹಾಯಕ ಪವರ್‌ಮನ್ ಸಂತೋಷ್ (26) ಮೃತರು. ವಿದ್ಯುತ್ ಪರಿವರ್ತಕ(ಟಿಸಿ) ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನ ಕುಟುಂಬದವರು ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.