ಕರ್ತವ್ಯದಲ್ಲಿ ಲೋಪವಾದರೆ ಕಠಿಣ ಕ್ರಮ

17ydg01
Published on

ಯಾದಗಿರಿ: ಮತದಾರರ ಪಟ್ಟಿಯಿಂದ ಹೊರಗುಳಿದ ಅರ್ಹರನ್ನು ಗುರುತಿಸಿ ಸೇರ್ಪಡೆ ಮಾಡಿ ಯಾವುದೇ ಲೋಪವಿಲ್ಲದೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ., ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಶುಕ್ರವಾರ ನಗರದ ಜಿಲ್ಲಾಡಳಿತ ಭವನ ಆಡಿಟೋರಿಯಂನಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಸಂಬಂಧ ವಿಧಾನಸಭಾ ಕ್ಷೇತ್ರಗಳ ಬಿಎಲ್ಓ, ಮೇಲ್ವಿಚಾರಕರು, ತಾಪ ಇಒ ಹಾಗೂ ತಹಸೀಲ್ದಾರರ ಸಭೆಯಲ್ಲಿ ಮಾತನಾಡಿ, ಯುವ ಮತದಾರರನ್ನು ಹೆಚ್ಚಾಗಿ ಪಟ್ಟಿಗೆ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಂಡು, ದೋಷ ರಹಿತವಾಗಿ ಕೊಡಬೇಕು. ಚುನಾವಣೆ ಸಂಬಂಧಿತ ವಿಚಾರದಲ್ಲಿ ಕರ್ತವ್ಯ ಲೋಪ ಕಂಡುಬಂದರೆ ಅಂಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಟ್ಟಿಯಲ್ಲಿ ಮತದಾರರು ನೋಂದಣಿ ಮಾಡಿಕೊಳ್ಳಲು ಅರ್ಹತಾ ದಿನಾಂಕಕ್ಕೆ ಸಂಬಂಧಿಸಿದಂತೆ ನಮೂನೆ-6ರಲ್ಲಿ ಅಜರ್ಿ ಸಲ್ಲಿಸಬೇಕು. ಹೆಸರಿದ್ದು ಅವರು ಸ್ಥಳಾಂತರ ಹೊಂದಿದ್ದಲ್ಲಿ ಮೃತ ಹೊಂದಿದ್ದಲ್ಲಿ, ಹೆಸರು ಪುನರಾವರ್ತನೆಯಾಗಿದ್ದಲ್ಲಿ ಹೆಸರು ತೆಗೆಯಲು ನಮೂನೆ-7ರಲ್ಲಿ, ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ-8ರಲ್ಲಿ ಸೂಕ್ತ ದಾಖಲೆಯೊಂದಿಗೆ ಅಜರ್ಿಗಳನ್ನು ಆಯಾ ಬಿಎಲ್ಓ ಹತ್ತಿರ ಪಡೆದುಕೊಳ್ಳಬೇಕು. ಲಿಂಗಾನುಪಾತದಲ್ಲಿ ವ್ಯತ್ಯಾಸವಿದ್ದರೆ ಪರಿಶೀಲಿಸಿ ನಿಖರ ವರದಿ ನೀಡಬೇಕು. ಜತೆಗೆ ಲೋಪಗಳಿದ್ದಲ್ಲಿ ಸರಿಪಡಿಸಬೇಕು ಎಂದು ಸೂಚಿಸಿದರು.

ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗಾಗಿ ಜನವರಿ 01, ಏಪ್ರಿಲ್ 01,ಜುಲೈ 01 ಮತ್ತು ಅಕ್ಟೋಬರ್ 01ರಂದು ಅರ್ಹತೆ ದಿನಾಂಕ ನೀಡಿದೆ. ಈ ಮಾಹಿತಿ ಹೆಚ್ಚಿನ ಪ್ರಚಾರ ಮಾಡಿ ಸಾರ್ವಜನಿಕರಿಗೆ ಎಂದು ನಿದರ್ೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net