ಕರ್ತವ್ಯಕ್ಕೆ ಚ್ಯುತಿ ತರದಂತೆ ಕರ್ತವ್ಯ ನಿರ್ವಹಿಸಿ

bkt-22-7
ನವನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ 11 ನೇ ತಂಡದ ಸಿಪಿಸಿ, ಆರ್ಪಿಸಿ ಮತ್ತು ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಗಮನ ಸೆಳೆಯಿತು.
Published on

ಬಾಗಲಕೋಟೆ: ಆಧುನಿಕ ತಂತ್ರಜ್ಞಾನದ ಇಂದಿನ ದಿನಮಾನಗಳಲ್ಲಿ ಪೊಲೀಸರ ಮೇಲೆ ಸಮಾಜದ ನಿಗಾ ಇದ್ದು, ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಇಲಾಖೆಯ ಹಾಗೂ ಸಮಾಜದ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸಬೇಕು ಎಂದು ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಎಸ್.ಸತೀಶ ಕುಮಾರ ಹೇಳಿದರು.
ನವನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ 11 ನೇ ತಂಡದ ಸಿಪಿಸಿ, ಸಿ ಆರ್ ಪಿ ಸಿ ಮತ್ತು ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದಿನ ದಿಮಾನಗಳಲ್ಲಿ ಒಂದು ಚಿಕ್ಕ ತಪ್ಪು ಘಟನೆ ಯಾದರೂ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ಹತ್ತು ಒಳ್ಳೆಯ ಕೆಲಸ ಮಾಡಿ ಒಂದು ತಪ್ಪು ಮಾಡಿದ ಘಟನೆ ವೈರಲ್ ಆದರೆ ಇಲಾಖೆಗೆ ಕಟ್ಟ ಹೆಸರು ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕರ್ತವ್ಯ ಬದ್ಧತೆಯಲ್ಲಿ ಚಾಕಚಕ್ಯತೆಯಿಂದ ಕೆಲಸ ನಿರ್ವಹಿಸಬೇಕು ಎಂದರು.
ಜಾಗತಿಕರಣದ ಹಾಗೂ ಕೊಳ್ಳುಬಾಕ ಸಂಸ್ಕೃತಿ ಇಂದಿನ ದಿನಗಳಲ್ಲಿ ಅನಾವಶ್ಯಕ ಖರ್ಚು ಮಾಡಿ, ವೈಭೋಗತನಕ್ಕೆ ಮರುಳಾಗದೇ ತಮ್ಮ ಸಂಬಳದ ಇತಿಮಿತಿಗಳಲ್ಲಿ ಉತ್ತಮ ಜೀವನ ನಡೆಸಬೇಕು. ಪೊಲೀಸರು ತಮ್ಮ ಆರೋಗ್ಯ ನಿರ್ಲಕ್ಷಿಸದೇ ಉತ್ತಮ ದೇಹ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ಇಲಾಖೆಯಲ್ಲಿ ಈಗ ಉತ್ತಮ ಆರೋಗ್ಯ ಸೇವೆಗಳು ಲಭ್ಯವಿರುತ್ತವೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಪ್ರತಿಜ್ಞಾವಿ ಬೋಧಿಸಿದರು. ಜಿ.ಪಂ ಸಿಇಒ ಟಿ.ಭೂಬಾಲನ್, ಡಿಎಸ್ಪಿಗಳಾದ ಪ್ರಕಾಶ ಮನ್ನೊಳ್ಳಿ, ಭರತ ತಳವಾರ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

=====

ಬಾಕ್ಸ್..ರಾಜ್ಯದ ವಿವಿಧೆಯಿಂದ 115 ಜನ ಪ್ರಶಿಕ್ಷಣಾರ್ಥಿಗಳು 8 ತಿಂಗಳ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ಸ್ನಾತಕೋತ್ತರ, ಇಂಜನಿಯರಿಂಗ್ ವಿವಿಧ ಪದವಿ ಹಾಗೂ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರು ಇದ್ದರು. ಫೈರಿಂಗ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಪಡೆಕನೂರ ಗ್ರಾಮದ ಎಪಿಸಿ ಶಿವಾನಂದ ತಳ್ಳೊಳ್ಳಿ ಪ್ರಥಮ, ಬೆಳಗಾವಿಯ ಹಿಡಕಲ್ಲ ಸಿಪಿಸಿ ಪ್ರಮೋದ ವಿ.ನಿಡಗುಂದಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಗದಾಳ ಗ್ರಾಮದ ಎಪಿಸಿ ಭರಮಪ್ಪ ನಾಗವ್ವಗೋಳ ದ್ವೀತಿಯ ಹಾಗೂ ಬೆಂಗಳೂರು ನಗರದ ದಾಸರಹಳ್ಳಿಯ ಸುಜಿತ್ ರಾವ್ ತೃತೀಯ ಸ್ಥಾನ ಪಡೆದಿದ್ದಾರೆ. ಆಲ್ ರೌಂಡ್ ಬೆಸ್ಟ್ ಬಹುಮಾನವನ್ನು ವಿಜಯಪುರದ ಬಸವರಾಜ ಪಾಟೀಲ ಪಡೆದುಕೊಂಡರು. ವಿವಿಧ ತಂಡಗಳ ಕವಾಯತು ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net