

ಹಾಸನ: ಕಾಡಾನೆ ದಾಳಿಯಿಂದ ಶುಕ್ರವಾರ ಮೃತಪಟ್ಟ ಮಹಿಳೆಯ ಅಂತ್ಯಕ್ರಿಯೆಗಾಗಿ ಮೃತ ದೇಹವನ್ನು ಪೊಲೀಸರು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾಕಾರರು ಕರ್ತವ್ಯಕ್ಕೆ ಅಡ್ಡಿಪಡಿಸಿದರಲ್ಲದೆ ಸರ್ಕಾರಿ ವಸ್ತುವನ್ನು ಹಾನಿ ಮಾಡಿದ ಹಿನ್ನೆಲೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದರು.
ಕಾಡಾನೆ ದಾಳಿಗೆ ಕವಿತಾ ಎಂಬ ಮಹಿಳೆ ಸಕಲೇಶಪುರದಲ್ಲಿ ಮೆರವಣಿಗೆ ನಡೆಸಿ ರಸ್ತೆ ತಡೆ ನಡೆಸಲು ಅವಕಾಶ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅವರಿಗೆ ಮನವರಿಕೆ ಮಾಡಿಕೊಟ್ಟರು ಕೂಡ ಬಗ್ಗದೇ ವಾಗ್ವಾದ ನಡೆಸಿದರು. ಅಲ್ಲದೆ ಸರ್ಕಾರಿ ವಸ್ತುಗಳಿಗೆ ಹಾನಿ ಪಡಿಸಿದರಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ 11 ಜನರನ್ನು ವಶಕ್ಕೆ ಪಡೆದುಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು
30 ರಿಂದ 35 ಜನರು ಪ್ರತಿಭಟನಾಕಾರರು ಮೃತ ದೇಹವನ್ನು ನನಗೆ ಹಸ್ತಾಂತರಿಸಿ ರಸ್ತೆ ಮಧ್ಯದಲ್ಲಿಟ್ಟು ಪ್ರತಿಭಟನೆ ನಡೆಸಲಾಗುವುದು, ಅರಣ್ಯ ಸಚಿವರು ಸ್ಥಳಕ್ಕೆ ಬರುವವರೆಗೂ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ ಹಠ ಹಿಡಿದಿದ್ದರು. ಕಾನೂನಿನ ರೀತಿಯಲ್ಲಿ ಶಾಂತಿಯುತ ಪ್ರತಿಭಟನೆಗೆ ನಮ್ಮದೇನು ಅಭ್ಯಂತರವಿಲ್ಲ ಆದರೆ ಕಾನೂನಿನ ಚೌಕಟ್ಟನ್ನ ಯಾರೇ ಮೀರಿದರೂ ಕೂಡ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುಸು ಎಂದರು.
ಈ ಹಿಂದೆ ಕಾಡಾನೆಯಿಂದ ಮೃತಪಟ್ಟ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಿದ್ದೇವೆ. ಈಗ 11 ಜನರು ಬಂದಿತರಾಗಿರುವ ಪ್ರತಿಭಟನಾಕಾರರು ಈ ಹಿಂದೆ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದಲ್ಲೂ ಮುಂದಾಗಿದ್ದಾಗ ಸ್ಥಳೀಯರು ದೂರು ನೀಡಿದ್ದರು. ಆಗ ಅವರನ್ನು ಕರೆದು ಬುದ್ಧಿ ಹೇಳಿ ಕಳುಹಿಸಲಾಗಿತ್ತು ಎಂದು ಹೇಳಿದರು.
ಅಲ್ಲದೆ ಕಳದ ನ.1ರಂದು ಕಾಡಾನೆಯಿಂದ ಮೃತಪಟ್ಟ ಶವವನ್ನು ಮಧ್ಯರಾತ್ರಿ ವರೆಗೂ ಇಟ್ಟುಕೊಂಡು ಕಾಡಾನೆ ಇರುವಂತಹ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದರು. ಆ ಸಂದರ್ಭದಲ್ಲಿ ಕೂಡ ಅವರಿಗೆ ಮನವರಿಕೆ ಮಾಡಿಕೊಟ್ಟರು ಕೂಡ ಹಠ ಬಿಡದೆ ಪ್ರತಿಭಟನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಿದ ನಂತರ ಪ್ರತಿಭಟನೆಯನ್ನು ಕೈಬಿಟ್ಟಿದ್ದರು ಎಂದರು.
ನಾವು ಯಾವುದೇ ದುರುದ್ದೇಶದಿಂದ ಅವರನ್ನ ಬಂಧಿಸಿಲ್ಲ ಈಗಾಗಲೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ ರಾತ್ರಿ ಅವರನ್ನ ವಶಕ್ಕೆ ಪಡೆದುಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಿದರು.