ಕರ್ಣನ ವ್ಯಕ್ತಿತ್ವ ಸರ್ವಶ್ರೇಷ್ಠ

sri nudi
ನಲ್ಲೂರಿನಲ್ಲಿ ಭಾಗವತ ಹಿರಿಯಣ್ಣ ಆಚಾರ್ಯ ಅವರನ್ನು ಗೌರವಿಸಲಾಯಿತು. ದಿನೇಶ್ ಅಂಗುರ್ಡಿ,ಕೇಶವ್ ಆಚಾರ್ಯ, ಸತ್ಯಾನಾರಾಯಣ್ ಆಚಾರ್ಯ ಇತರರಿದ್ದರು.
Published on

ಶೃಂಗೇರಿ: ಬಿಲ್ಲುವಿದ್ಯೆ, ಶಬ್ಧವೇದಿ ವಿದ್ಯೆಗಳಲ್ಲಿ ಅತ್ಯಂತ ಪ್ರವೀಣನಾದ ಕರ್ಣನ ಉದಾತ್ತ ಗುಣ ಸರ್ವಶ್ರೇಷ್ಠ. ಕೊಟ್ಟ ಮಾತು ಹಾಗೂ ಇತ್ತ ಭಾಷೆಗೆ ಎರಡಕ್ಕೂ ಎಂದಿಗೂ ತಪ್ಪದ ಕರ್ಣನ ಆದರ್ಶ ವ್ಯಕ್ತಿತ್ವ ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಿದೆ ಎಂದು ಯಕ್ಷಗಾನ ಕಲಾವಿದ ಜನಾರ್ದನ ಮಂಡಗಾರು ತಿಳಿಸಿದರು.

ಸೋಮವಾರ ನಲ್ಲೂರಿನ ಆರ್.ಸತ್ಯನಾರಾಯಣ ಆಚಾರ್ಯ ಅವರ ಮನೆಯಲ್ಲಿ ಆಯೋಜಿಸಿದ್ದ ನುಡಿನಿತ್ಯೋತ್ಸವ ಹಾಗೂ ಬಜೆ ಪ್ರಭಾಕರ್ ನಾಯಕ್ ದತ್ತಿ ಉಪನ್ಯಾಸದಲ್ಲಿ ಕುಮಾರ ವ್ಯಾಸ ಚಿತ್ರಿಸಿದ ಕರ್ಣ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಜೀವನದ ಅನುಭವದ ಸಾರ ಹಾಗೂ ಬದುಕಿನ ಏರಿಳಿತಗಳನ್ನು ಬಿಂಬಿಸುವ ಕರ್ಣನ ಪಾತ್ರ ಮಹಾಭಾರತದಲ್ಲಿ ಅತ್ಯಂತ ವಿಶಿಷ್ಟವಾದುದು. ಕರ್ಣನ ಜನನ, ವಿದ್ಯಾಭ್ಯಾಸ, ಆತನ ಅಂತ್ಯ ಎಲ್ಲವೂ ದೈವಸಂಕಲ್ಪವಾಗಿತ್ತು ಎಂದರು.

ದತ್ತಿ ದಾನಿ ಕುಟುಂಬದ ಗೋಕುಲ್‌ದಾಸ್ ನಾಯಕ್ ಮಾತನಾಡಿ, ನಾವು ಕನ್ನಡಿಗರು ಎಂಬ ಹೆಮ್ಮೆ ಪ್ರತಿಯೊಬ್ಬರಲ್ಲಿ ಇದ್ದರೆ ಮಾತ್ರ ಭಾಷೆ ಬೆಳವಣಿಗೆ ಸಾಧ್ಯ. ಮನೆಯಲ್ಲಿ ಕನ್ನಡ ವಾತಾವರಣ ಬೆಳೆಸುವಲ್ಲಿ ಪಾಲಕರ ಜವಾಬ್ದಾರಿ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಹೇಳಿದರು.

ತೆಂಕು ಹಾಗೂ ಬಡಗುತಿಟ್ಟಿನ ಮೇರುಭಾಗವತ ಶ್ರೀ ಹಿರಿಯಣ್ಣ ಆಚಾರ್ಯ ಅವರನ್ನು ಗೌರವಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಬಿಇಒ ಎನ್.ಜಿ.ರಾಘವೇಂದ್ರ, ಹಿರಿಯ ಯಕ್ಷಗಾನ ಕಲಾವಿದ ನಾಗೇಶ್ ಕಾಮತ್, ಸುಮಂಗಲಿ ಆನಂದಸ್ವಾಮಿ, ಪೊಲೀಸ್ ಉಪಠಾಣಾಧಿಕಾರಿ ಡಾ. ಮೋಹನ್ ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net