ಕರೋಹಟ್ಟಿ ಗ್ರಾಪಂ ಅಧ್ಯಕ್ಷೆ ಜಯಶ್ರೀ

07tnp02
ತಿ.ನರಸೀಪುರ ತಾಲೂಕು ಕರೋಹಟ್ಟಿ ಗ್ರಾಪಂ ನೂತನ ಅಧ್ಯಕ್ಷರಾಗಿ ಜಯಶ್ರೀ, ಉಪಾಧ್ಯಕ್ಷರಾಗಿ ನಾಗರಾಜು ಆಯ್ಕೆಯಾದರು. ಪ್ರಭು, ಜಗದೀಶ್, ಸುರೇಶ್, ಪುಟ್ಟಸ್ವಾಮಿ, ರೇವಣ್ಣ, ಮಂಜುಳಾ ಇತರರು ಇದ್ದರು.
Published on

ಮೈಸೂರು: ತಿ.ನರಸೀಪುರ ತಾಲೂಕಿನ ಕರೋಹಟ್ಟಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಯಶ್ರೀ, ಉಪಾಧ್ಯಕ್ಷರಾಗಿ ನಾಗರಾಜು ಆಯ್ಕೆಯಾದರು.
ಗ್ರಾಮದ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸವಿತಾ ಹಾಗೂ ಜಯಶ್ರೀ, ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜು ಮತ್ತು ದಿವ್ಯಾ ನಾಮಪತ್ರ ಸಲ್ಲಿಸಿದರು.

ಜಯಶ್ರೀ 13 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, 5 ಮತಗಳನ್ನು ಪಡೆದ ಸವಿತಾ ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜು 14 ಮತಗಳನ್ನು ಪಡೆದು ಜಯ ಗಳಿಸಿದರೆ, ದಿವ್ಯಾ 4 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ಚುನಾವಣಾಧಿಕಾರಿಯಾಗಿ ನೀರಾವರಿ ಇಲಾಖೆಯ ಎಇಇ ಸುಹಾಸ್ ಕಾರ್ಯನಿರ್ವಹಿಸಿದರು. ಸದಸ್ಯರಾದ ಪ್ರಭು, ಜಗದೀಶ್, ಸುರೇಶ್, ಪುಟ್ಟಸ್ವಾಮಿ, ರೇವಣ್ಣ, ಮಂಜುಳಾ ರೇವಣ್ಣ, ನಂದಿನಿ, ಮಮತಾ, ಮಂಜು, ಸಿದ್ದಮ್ಮ, ಸುಶೀಲಮ್ಮ, ಪುಟ್ಟಬಸಮ್ಮ, ಗೋವಿಂದ, ಪ್ರಕಾಶ, ಗುತ್ತಿಗೆದಾರ ರಾಜಣ್ಣ, ಕೆ.ಎನ್.ಪ್ರಭುಸ್ವಾಮಿ, ಶಿವಕುಮಾರ್, ಬಿಜೆಪಿ ಮುಖಂಡ ಕರೋಹಟ್ಟಿ ಮಹದೇವಯ್ಯ ಗುರುಮಲ್ಲಪ್ಪ, ಗೌಡ್ರ ಮಹೇಶ್, ಬನ್ನಹಳ್ಳಿ ಹುಂಡಿ ಸೋಮಣ್ಣ, ಡಿ.ಎಂ.ಸ್ವಾಮಿ, ಬಸವರಾಜು, ಮಾದೇಶ್, ಮಲ್ಲಿಕಾರ್ಜುನಪ್ಪ,ನಟರಾಜು, ಯೋಗೀಶ್(ಲೋಕಿ), ಮಹದೇವಯ್ಯ ಮತ್ತಿತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net