ಕರೊನಾದಿಂದ ಗುಣವಾದ ಐವರ ಬಿಡುಗಡೆ

28-gdg-6 ph
Published on

ಗದಗ: ಕೋವಿಡ್ 19 ಸೋಂಕಿತ ಪಿ 973, ಪಿ 1178, ಪಿ 1180, ಪಿ 1181 ಮತ್ತು ಪಿ 1182 ಗುಣವಾಗಿ ಗುರುವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಚಪ್ಪಾಳೆ ತಟ್ಟಿ, ಎಲ್ಲರಿಗೂ ರೇಷನ್ ಕಿಟ್, ಮಾಸ್ಕ್ ನೀಡಿ ಆಂಬುಲೆನ್ಸ್ ಮೂಲಕ ಮನೆಗೆ ಕಳುಹಿಸಿಕೊಟ್ಟರು.

ಸ್ಥಳೀಯ ಮಂಜುನಾಥ ನಗರದ 28 ವರ್ಷದ (ಪಿ. 973) ಪುರುಷ ರೋಗಿಗೆ ಮೇ 12ರಂದು ಮತ್ತು ಇನ್ನುಳಿದ ನಾಲ್ವರಾದ ಶಿರೋಳದ 30 ವರ್ಷದ (ಪಿ. 1178) ಪುರುಷ ರೋಗಿ, ಸ್ಥಳೀಯ ಗಂಜಿಬಸವೇಶ್ವರ ವೃತ್ತದ 58 ವರ್ಷದ ಪುರುಷ (ಪಿ 1180), 32 ವರ್ಷದ 32 ವರ್ಷದ ಪುರುಷ (ಪಿ 1181), 12 ವರ್ಷದ ಬಾಲಕನಿಗೆ (ಪಿ 1182) ಮೇ 16ರಂದು ಸೋಂಕು ದೃಢಪಟ್ಟಿತ್ತು. ಎಲ್ಲರನ್ನೂ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ 19 ಪ್ರತ್ಯೇಕ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಚಿಕಿತ್ಸೆಯ ನಂತರ ಮೇ 27ರಂದು ಜಿಮ್್ಸ ಪ್ರಯೋಗಾಲಯದಲ್ಲಿ ಐವರು ರೋಗಿಗಳ ಗಂಟಲ ದ್ರವ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿ ನೆಗಟಿವ್ ಬಂದಿವೆ. ಹೀಗಾಗಿ ಅವರನ್ನು ಗುರುವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡುತ್ತಿದ್ದೇವೆ. ಮುಂದಿನ 14 ದಿನಗಳ ಕಾಲ ಬಿಡುಗಡೆಗೊಂಡ ವ್ಯಕ್ತಿಗಳನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತಿದೆ ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 35 ಸೋಂಕಿತರ ಪೈಕಿ 24 ಸಕ್ರಿಯ ಕೇಸ್​ಗಳಿದ್ದು, ಒಬ್ಬರು ಮೃತಪಟ್ಟಿದ್ದಾರೆ. 10 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಡಾ. ಆರ್.ಟಿ. ಪಾಟೀಲ, ಡಾ. ಕೊಟ್ರೇಶ ಹಾಗೂ ಜಿಮ್್ಸ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net