ಕರೊನಾಘಾತಕ್ಕೆ ಗದಗ ಗಢಗಢ!

23-gdg-1a
Published on

ಗದಗ: ಗದಗ ಜಿಲ್ಲೆಯ ಜನರಿಗೆ ಶನಿವಾರ ಕರಾಳ ದಿನವಾಗಿ ಪರಿಣಮಿಸಿದೆ. ಆರು ಅಪ್ರಾಪ್ತರು ಸೇರಿ ಮತ್ತೆ 15 ಜನರಿಗೆ ಮಹಾಮಾರಿ ಕರೊನಾ ವೈರಸ್ ವಕ್ಕರಿಸಿ ಶಾಕ್ ನೀಡಿದೆ.

ನಗರದ ಕಂಟೇನ್ಮೆಂಟ್ ವಲಯ ಗಂಜಿ ಬಸವೇಶ್ವರ ಓಣಿಯು ಕರೊನಾ ವೈರಸ್ ಹಾಟ್​ಸ್ಪಾಟ್ ಆಗಿ ಮುಂದುವರಿದಿದೆ. ಶನಿವಾರ ದೃಢಪಟ್ಟ 15 ಪಾಸಿಟಿವ್ ಕೇಸ್​ಗಳ ಪೈಕಿ 9 ಕೇಸ್​ಗಳು ಇಲ್ಲಿಂದಲೇ ಬಂದಿದ್ದರಿಂದ ಗದಗ-ಬೆಟಗೇರಿ ಅವಳಿನಗರದ ಜನರು ಬೆಚ್ಚಿಬೀಳುವಂತಾಗಿದೆ.

ಗಂಜಿ ಬಸವೇಶ್ವರ ಓಣಿಯ ಕಂಟೇನ್ಮೆಂಟ್ ವಲಯದ ಪಿ 1932(50 ವರ್ಷದ ಮಹಿಳೆ), ಪಿ 1933 (20 ವರ್ಷದ ಮಹಿಳೆ), ಪಿ 1934 (22 ವರ್ಷದ ಮಹಿಳೆ), ಪಿ 1935(18 ವರ್ಷದ ಯುವಕ), ಪಿ 1936 (18 ವರ್ಷದ ಯುವತಿ), ಪಿ 1937(8 ವರ್ಷದ ಬಾಲಕಿ), ಪಿ 1938(21 ವರ್ಷದ ಯುವಕ), ಪಿ 1794 (15 ವರ್ಷದ ಬಾಲಕ) ಹಾಗೂ 16 ವರ್ಷದ ಬಾಲಕ, ಪಿ 1795 ಗೆ ಪಿ 913 ಕೇಸ್​ನಿಂದ ಸೋಂಕು ತಗುಲಿದೆ. ಇದರ ಜತೆಗೆ ರಾಜಸ್ಥಾನದಿಂದ ಬಂದಿರುವ ಪಿ 1763(17 ವರ್ಷದ ಬಾಲಕಿ), ಗುಜರಾತ್​ನಿಂದ ಬಂದಿರುವ ಪಿ 1744 (25 ವರ್ಷದ ಯುವಕ), ಗುಜರಾತ್​ನಿಂದ ಬಂದಿರುವ ಪಿ 1745(17 ವರ್ಷದ ಬಾಲಕ) ಹಾಗೂ ಮಹಾರಾಷ್ಟ್ರ ದಿಂದ ಬಂದ ಪಿ 1746(7 ವರ್ಷದ ಬಾಲಕಿ), ಪಿ 1747 (20 ವರ್ಷದ ಯುವಕ), ಪಿ 1748 ಗೆ (50 ವರ್ಷದ ಮಹಿಳೆ) ಸೋಂಕು ದೃಢಪಟ್ಟಿದೆ. ಶನಿವಾರ ಬಂದಿರುವ 15 ಪ್ರಕರಣ ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೂ ಒಬ್ಬರು ಮೃತಪಟ್ಟಿದ್ದು, ಐವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 29 ಕೇಸ್​ಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಕಂಟಕವಾದ ಗಂಜಿ ಬಸವೇಶ್ವರ ಪ್ರದೇಶ: ಗಂಜಿ ಬಸವೇಶ್ವರ ಪ್ರದೇಶದಲ್ಲಿ 75 ವರ್ಷದ ನಿವೃತ್ತ ಸರ್ಕಾರಿ ನೌಕರರೊಬ್ಬರಿಗೆ ಮೊದಲು ಸೋಂಕು ಪತ್ತೆಯಾಯಿತು. ಆದರೆ, ಅವರಿಗೆ ಸೋಂಕು ತಗುಲಿದ್ದು ಹೇಗೆ ಎಂಬುದು ಜಿಲ್ಲಾಡಳಿತಕ್ಕೆ ಯಕ್ಷಪ್ರಶ್ನೆಯಾಗಿ ಉಳಿದಿದೆ. ಈ ಪ್ರದೇಶದ ಮೊದಲ ಕೇಸ್​ನ ಸಂಪರ್ಕದಿಂದ ಮತ್ತಿಬ್ಬರಿಗೆ, ತದನಂತರ ಮತ್ತಿಬ್ಬರ ಸಂಪರ್ಕಕ್ಕೆ ಬಂದ ನಾಲ್ವರಿಗೆ ಹೀಗೆ ಸೋಂಕು ಹಬ್ಬುತ್ತಾ ಸಾಗಿತು. ಇದೊಂದೇ ಪ್ರದೇಶದಿಂದ ಬರೋಬ್ಬರಿ 16 ಕೇಸ್​ಗಳು ಪತ್ತೆಯಾಗಿವೆ. ನಗರದ ಗಂಜಿ ಬಸವೇಶ್ವರ ಓಣಿಯ ಕಂಟೇನ್ಮೆಂಟ್ ಪ್ರದೇಶದ ನಿವಾಸಿ 61 ವರ್ಷದ ವ್ಯಕ್ತಿಯಿಂದ (ಪಿ 913) ಒಂಬತ್ತು ಜನರಿಗೆ ಸೋಂಕು ತಗುಲಿದೆ. ಗಂಜಿ ಬಸವೇಶ್ವರ ಓಣಿಯಲ್ಲಿ ಒಟ್ಟು 863 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪಿ 913 ವ್ಯಕ್ತಿಯ ಮನೆಯ ಸುತ್ತಮುತ್ತಲಿನ ಮನೆಗಳ ನಿವಾಸಿಗಳಾದ 45 ಜನರನ್ನು ಕಳೆದ 12 ದಿನಗಳ ಹಿಂದೆ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಇವರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದ್ದ ಮೊದಲ ದಿನವೇ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ನಂತರ ಐದನೇ ದಿನಕ್ಕೆ ಮತ್ತೊಂದು ಪರೀಕ್ಷೆ ಮಾಡಲಾಯಿತು. ಈ ಎರಡೂ ಪರೀಕ್ಷೆಯಲ್ಲಿ ಎಲ್ಲ 45 ಜನರ ವೈದ್ಯಕೀಯ ವರದಿ ನಕಾರಾತ್ಮಕ ಎಂದು ಬಂದಿದ್ದರಿಂದ ವೈದ್ಯಾಧಿಕಾರಿಗಳು ನೆಮ್ಮದಿ ನಿಟ್ಟಿಸಿರು ಬಿಡುವಂತಾಗಿತ್ತು. ಆದರೆ, 12 ದಿನದ ಮೂರನೇ ಪರೀಕ್ಷೆಯಲ್ಲಿ 45 ಜನರ ಪೈಕಿ 9 ಜನರ ವರದಿ ಪಾಸಿಟಿವ್ ಬರುವ ಮೂಲಕ ಜಿಲ್ಲಾಡಳಿತಕ್ಕೆ ಆಘಾತ ನೀಡಿದೆ.

ಕರಾಳ ಶನಿವಾರ: ಶನಿವಾರ ಒಂದೇ ದಿನ ಕಂಟೇನ್ಮೆಂಟ್ ವಲಯದ 9 ಜನರಿಗೆ ಸೋಂಕು ದೃಢಪಟ್ಟಿದ್ದು ಅವಳಿನಗರದ ಜನರ ಎದೆಯಲ್ಲಿ ಢವಢವ ಶುರುವಾಗಿದೆ. ಲಾಕ್​ಡೌನ್ 1ರ ಸಮಯದಲ್ಲಿ ಜಿಲ್ಲೆಯಲ್ಲಿ ಒಂದೇ ಒಂದು ಪಾಸಿಟಿವ್ ಬಂದಿತ್ತು. ಆದಾದ ಬಳಿಕ ಲಾಕ್​ಡೌನ್ 2 ಸಮಯದಲ್ಲಿ 5 ಪಾಸಿಟಿವ್ ಕೇಸ್​ಗಳು ಪತ್ತೆಯಾದವು. ನಂತರ ಜಿಮ್್ಸ ವೈದ್ಯರ ಶ್ರಮದಿಂದ ಎಲ್ಲ ಕೇಸ್​ಗಳು ಗುಣಮುಖರಾಗಿದ್ದರಿಂದ ಸಕ್ರಿಯ ಕೇಸ್​ಗಳು ಶೂನ್ಯವಾದವು. ಇದರಿಂದ ಜಿಲ್ಲೆಯ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಈ ಸಂತೋಷ ಬಹಳ ದಿನ ಉಳಿಯಲಿಲ್ಲ. ಲಾಕ್​ಡೌನ್ 3ರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಹೋಗಿ 16ಕ್ಕೆ ತಲುಪಿತು. ಲಾಕ್​ಡೌನ್ 4ರಲ್ಲಿ ಜಿಲ್ಲೆಯಲ್ಲಿ 29 ಸೋಂಕಿತರು ಪತ್ತೆಯಾದರು. ಇದರಿಂದ ಜಿಲ್ಲೆಯಲ್ಲಿ ಸದ್ಯಕ್ಕೆ 35 ಸೋಂಕಿತರು ಪತ್ತೆಯಾಗಿದ್ದಾರೆ. ಶನಿವಾರ ಒಂದೇ ದಿನಕ್ಕೆ 15 ಪಾಸಿಟಿವ್ ಕೇಸ್ ಪತ್ತೆಯಾಗಿದ್ದರಿಂದ ಗದಗ-ಬೆಟಗೇರಿ ಜನರು ಅಕ್ಷರಶಃ ನಲುಗಿಹೋಗಿದ್ದಾರೆ.

ಸೋಂಕಿತರ ಪ್ರಯಾಣದ ವಿವರ: ಶನಿವಾರ ಪತ್ತೆಯಾಗಿರುವ ಸೋಂಕಿತರ ಪೈಕಿ ಪಿ 1744 ಹಾಗೂ ಪಿ 1745 ಸೇರಿ 17 ಜನ ಮೇ 18 ರಂದು ಗುಜರಾತ್​ನ ಅಹಮದಾಬಾದ್​ದಿಂದ ಸ್ವಂತ ಎರಡು ವಾಹನಗಳಲ್ಲಿ ಜಿಲ್ಲೆಗೆ ಆಗಮಿಸಿದ್ದಾರೆ. ಈ ಇಬ್ಬರೂ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ ಉಳಿದ 15 ಜನರನ್ನು ನಿಗಾದಲ್ಲಿರಿಸಲಾಗಿದೆ.

ಇನ್ನು ಮಹಾರಾಷ್ಟ್ರದಿಂದ ನಿಪ್ಪಾಣಿವರೆಗೆ ಬಾಡಿಗೆ ವಾಹನದ ಮೂಲಕ ಬಂದು ನಿಪ್ಪಾಣಿಯಿಂದ ಗದಗವರೆಗೆ ಲಾರಿ ಮೂಲಕ ಜಿಲ್ಲೆಗೆ ಆಗಮಿಸಿದ್ದ 4 ಜನರಲ್ಲಿ ಪಿ-1746, ಪಿ-1747, ಪಿ-1748 ಮೂರು ಜನರಿಗೆ ಸೋಂಕು ದೃಢಪಟ್ಟಿದೆ. ಪ್ರಾಥಮಿಕ ಸಂಪರ್ಕ ಹೊಂದಿದ ಒಬ್ಬನನ್ನು ನಿಗಾದಲ್ಲಿರಿಸಲಾಗಿದೆ.

ಮೇ 18ರಂದು ರಾಜಸ್ಥಾನದ ಧಾರ್ವಿುಕ ಕ್ಷೇತ್ರ ಅಜ್ಮೀರ್​ಗೆ ಭೇಟಿ ನೀಡಿದ ಲಕ್ಷೆ್ಮೕಶ್ವರ ತಾಲೂಕಿನ 4 ಕುಟುಂಬದ ಒಟ್ಟು 17 ಜನರಲ್ಲಿ ಪಿ 1763ಗೆ ಸೋಂಕು ದೃಢಪಟ್ಟಿದೆ. ಪ್ರಾಥಮಿಕ ಸಂಪರ್ಕ ಹೊಂದಿದ 16, ದ್ವಿತೀಯ ಸಂಪರ್ಕ ಹೊಂದಿದ 5 ಜನರು ಸೇರಿ ಒಟ್ಟು 21 ಜನರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸತೀಶ ಬಸರೀಗಿಡದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net