ಕರೊನಾಗೆ ಮತ್ತಿಬ್ಬರು ಬಲಿ

carona logo
Published on

ಗದಗ: ಜಿಲ್ಲೆಯಲ್ಲಿ ಸೋಮವಾರ 141 ಜನರಿಗೆ ಸೋಂಕು ತಗುಲಿದ್ದು, 102 ಜನರು ಸೋಂಕಿನಿಂದ ಗುಣವಾಗಿದ್ದಾರೆ. ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ.

ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ ಬೆಟಗೇರಿ ನಗರದ ರೈಲ್ವೆ ಕ್ವಾರ್ಟರ್ಸ್, ಹುಡ್ಕೋ ಕಾಲನಿ 1ನೇ ಕ್ರಾಸ್ , ಬ್ಯಾಂಕರ್ ಕಾಲನಿ, ಜಿಮ್ಸ್ ಹಾಸ್ಪಿಟಲ್ ಕ್ವಾರ್ಟರ್ಸ್, ಹುಬ್ಬಳ್ಳಿ ರಸ್ತೆ, ಒಕ್ಕಲಗೇರಿ ಓಣಿ, ಜಿಮ್ಸ್ ಹಾಸ್ಪಿಟಲ್, ಕಳಸಾಪುರ ರಸ್ತೆ, ಮುಳಗುಂದ ನಾಕಾ, ಬೆಟಗೇರಿಯ ಬಸವೇಶ್ವರ ನಗರ, ಬಸವನಬಾವಿ ಓಣಿ, ಶಹಪುರ ಪೇಟೆ, ಕಿಲ್ಲಾ ಓಣಿ, ಟ್ಯಾಗೋರ್ ರಸ್ತೆ, ಸಾಯಿ ಬಾಬಾ ದೇವಸ್ಥಾನದ ಹಿಂದುಗಡೆ, ನಂದೀಶ್ವರನಗರ, ಲಕ್ಷ್ಮೀನಗರ, ಗದಗ ತಾಲೂಕಿನ ಹರ್ತಿ, ಕುರ್ತಕೋಟಿ, ಲಕ್ಕುಂಡಿ, ಕಣವಿ, ಹೊಸೂರು, ಮುಳಗುಂದ.

ಮುಂಡರಗಿ ಪಟ್ಟಣದ ಕದಾಂಪುರ ಸ್ಟಾಪ್ , ಹುಡ್ಕೋ ಕಾಲನಿ, ದುರ್ಗಾದೇವಿ ನಗರ, ಮುಂಡರಗಿ ತಾಲೂಕಿನ ಡೋಣಿ, ಎಕ್ಲಾಸಪುರ, ಕಲಕೇರಿ, ಪೇಠಾಲೂರು, ಡಂಬಳ, ಮುಷ್ಟಿಕೊಪ್ಪ, ಬಾಗೇವಾಡಿ, ಹೆಸರೂರ, ಶಿರೋಳ, ಪಾಪನಾಶಿ, ಮುಂಡವಾಡ, ಹಮ್ಮಿಗಿ, ಕೊರ್ಲಳ್ಳಿ. ನರಗುಂದ ಪಟ್ಟಣದ ಸರಸ್ವತಿ ನಗರ, ಕಸಬಾ ಓಣಿ, ನರಗುಂದ ತಾಲೂಕಿನ ಕುರುಗೋವಿನಕೊಪ್ಪ ರೋಣ ಪಟ್ಟಣದ ತಳವಾರ ಓಣಿ, ಆಶ್ರಯ ಪ್ಲಾಟ್, ಶಿವಪೇಟ 7ನೇ ಕ್ರಾಸ್, ಜನತಾ ಪ್ಲಾಟ್, ಹೊರಪೇಟೆ ಓಣಿ, ರೋಣ ತಾಲೂಕಿನ ಕೃಷ್ಣಾಪುರ, ಬೆಳವಣಕಿ, ಕಲ್ಲಿಗನೂರು, ಸರ್ಜಾಪುರ, ಹೊಸಳ್ಳಿ , ಸೂಡಿ, ಹಿರೇಹಾಳ, ಮುಶಿಗೇರಿ, ರಾಜೂರು, ಕುರಟ್ಟಿ, ಹೊಳೆ ಆಲೂರ, ಹಿರೇಮಣ್ಣೂರ, ಹೊಳೆಹಡಗಲಿ, ನರೇಗಲ್. ಶಿರಹಟ್ಟಿ ತಾಲೂಕಿನ ಉಳ್ಳಟ್ಟಿ, ಸೂರಣಗಿ, ಬೆಳ್ಳಟ್ಟಿ, ನಾರಾಯಣಪುರ, ಕೋಗನೂರ, ಗೋವನಕೊಪ್ಪ,ಲಕ್ಷ್ಮೇಶ್ವರ ಪಟ್ಟಣದ ಕೋರ್ಟ್ ಪ್ರದೇಶ, ಸುಗ್ನಳ್ಳಿ. ಗಜೇಂದ್ರಗಡ ಪಟ್ಟಣದ ಗಜೇಂದ್ರಗಡ , ಸರ್ಕಾರಿ ಶಾಲೆಯ ಹತ್ತಿರ, ಪತ್ತಾರಗಲ್ಲಿ, ಜವಳಿ ಪೇಟೆಯಲ್ಲಿ ಸೋಂಕು ಪತ್ತೆಯಾಗಿದೆ. ಬೆಟಗೇರಿ ನಿವಾಸಿಗಳಾದ 84 ವರ್ಷ, 68 ವರ್ಷದ ವ್ಯಕ್ತಿಗಳು ಸೋಂಕಿನಿಂದ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net