ಕರೊನಾಕ್ಕೆ ಮತ್ತೆ ಇಬ್ಬರ ಬಲಿ

B SHARAT DC Photo
Published on

ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಹೆಚ್ಚಾಗುತ್ತಲೇ ಇದೆ. ಸಾವಿನ ಸರಣಿ ಮುಂದುವರಿದಿದೆ. ಚೇತರಿಕೆ ಪ್ರಮಾಣದಲ್ಲೂ ಏರಿಕೆ ಕಂಡಿದ್ದು ಜನರಲ್ಲಿ ಆತಂಕದ ನಡುವೆಯೂ ಸ್ವಲ್ಪ ನೆಮ್ಮದಿ ಮೂಡಿಸಿದೆ.
72 ವರ್ಷದ ವೃದ್ಧ ಹಾಗೂ 50 ವರ್ಷ ವ್ಯಕ್ತಿ ಕರೊನಾಕ್ಕೆ ಬಲಿಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 17ಕ್ಕೇರಿದೆ. ಒಂದೇ ದಿನ 33ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 1364ಕ್ಕೇರಿದೆ. ಶನಿವಾರ 24 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿವರೆಗೆ ಒಟ್ಟು 959 ಜನರು ಚೇತರಿಸಿಕೊಂಡಿದ್ದಾರೆ. 388 ಸಕ್ರಿಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ವರ್ಷದ ಬಾಲಕ ಹಾಗೂ ಏಳು ವರ್ಷದ ಬಾಲಕಿ ಸೇರಿ 17 ಪುರುಷರು, 16 ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ. ಪ್ರತಿದಿನ ಚೇತರಿಕೆ ಪ್ರಮಾಣದಲ್ಲೂ ಏರಿಕೆ ಕಂಡು ಬರುತ್ತಿರುವುದರಿಂದ ಕೊಂಚ ನೆಮ್ಮದಿ ಮೂಡಿಸುವಂತಾಗಿದೆ. ಶನಿವಾರ ಒಂದೇ ದಿನ ಇಬ್ಬರು ಸಾವಿಗೀಡಾಗಿದ್ದು ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net