ಕರೊನಾ ಹರಡುವಿಕೆ ನಿಯಂತ್ರಣದಲ್ಲಿದೆ

Jagadishshettar11a
Published on

ಹುಬ್ಬಳ್ಳಿ: ದೇಶಾದ್ಯಂತ ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಕರೊನಾ ಹರಡುವಿಕೆ ನಿಯಂತ್ರಣದಲ್ಲಿದೆ. ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಬೇರೆ ದೇಶಗಳಿಗಿಂತ ನಮ್ಮಲ್ಲಿ ಸ್ಥಿತಿ ಸಮಾಧಾನಕರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಕೇಶ್ವಾಪುರದ ಜೇಮ್್ಸ ಲ್ಯಾಂಡ್​ನಲ್ಲಿ ನಾಗರಿಕರಿಗೆ ಸಂಘ-ಸಂಸ್ಥೆಗಳಿಂದ ನೀಡುವ ಆಹಾರ ಧಾನ್ಯ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಾಕ್​ಡೌನ್ ಸಂದರ್ಭದಲ್ಲಿ ಬಡವರಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆಗೆ ಸಂಘ-ಸಂಸ್ಥೆಗಳು ಕೈ ಜೋಡಿಸಿವೆ. ಬಡವರಿಗೆ ಅಗತ್ಯವಾದ ದವಸ-ಧಾನ್ಯಗಳು ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುತ್ತಿವೆ. ಜನರು ಲಾಕ್​ಡೌನ್ ಸರಿಯಾಗಿ ಪಾಲಿಸಿದರೆ ಕರೊನಾ ವಿಪತ್ತಿನಿಂದ ಪಾರಾಗಬಹುದು ಎಂದರು.

ಜೇಮ್್ಸ ಲ್ಯಾಂಡ್, ಗೌಳಿಗಲ್ಲಿ, ಪ್ರಶಾಂತ ನಗರ, ಶಬರಿ ನಗರ ಆಜಾದ್ ಕಾಲನಿಯ 250ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಧಾನ್ಯ ಹಾಗೂ ದಿನಸಿಗಳನ್ನು ವಿತರಿಸಲಾಯಿತು. ಅರುಣ ಶಿರ್ಕೆ, ಸುನೀಲ ದಳವಿ, ಮಲ್ಲಿಕಾರ್ಜುನ ನವಳಲ್ಲಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net